ಕರಾವಳಿ
ಕೇಂದ್ರ ಬಜೆಟ್” ಮತ್ತು “ಭಾರತದ ಆರ್ಥಿಕತೆ” ವಿಚಾರಗೋಷ್ಠಿ ಕಾರ್ಯಕ್ರಮ – ಶಾಸಕ ರಘುಪತಿ ಭಟ್ ಉದ್ಘಾಟನೆ

ಆರ್ಥಿಕ ಪ್ರಕೋಷ್ಠ ಬಿಜೆಪಿ ಉಡುಪಿ ಜಿಲ್ಲೆ ಮತ್ತು ಮಾಧ್ಯಮ ಪ್ರಕೋಷ್ಠ ಬಿಜೆಪಿ ಉಡುಪಿ ಜಿಲ್ಲೆ ಜಂಟಿಯಾಗಿ ನಡೆಸುತ್ತಿರುವ “ಕೇಂದ್ರ ಬಜೆಟ್” ಮತ್ತು “ಭಾರತದ ಆರ್ಥಿಕತೆ” ವಿಚಾರಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಇಂದು ದಿನಾಂಕ 19-02-2022 ರಂದು ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಹಾಲ್ ನಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠ ಸಂಚಾಲಕರಾದ ಸಮೀರ್ ಕಗಲ್ಕರ್, ಉಡುಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠ ಸಂಚಾಲಕರಾದ ದಿವಾಕರ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಉಡುಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠ ಸಮಿತಿ ಸದಸ್ಯರಾದ ಚಿದಾನಂದ ಉಚ್ಚಿಲ, ಜಿಲ್ಲಾ ಬಿಜೆಪಿ ವಕ್ತಾರ ಗುರುಪ್ರಸಾದ್ ಶೆಟ್ಟಿ, ಸಹ ವಕ್ತಾರರಾದ ಶಿವಕುಮಾರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ ಸತ್ಯಾನಂದ ನಾಯಕ್ ಉಪಸ್ಥಿತರಿದ್ದರು.