ಕರಾವಳಿ

ಶ್ರೀ ನಳಿನ್ ಕುಮಾರ್ ಕಟೀಲ್, ಶಾಸಕ ಕೆ ರಘುಪತಿ ಭಟ್ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

“ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಪರ್ಕಳ ವಾರ್ಡಿನಲ್ಲಿ ಸುಮಾರು 60 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡಲಾಗುತ್ತಿದ್ದು, ಇಂದು ದಿನಾಂಕ 25-07-2021 ರಂದು ಪರ್ಕಳ ವಾರ್ಡಿನ ಸಣ್ಣಕ್ಕಿಬೆಟ್ಟು ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕೈಗೊಳ್ಳುವ ಮೂಲಕ ಉಡುಪಿ ನಗರಸಭಾ ವ್ಯಾಪ್ತಿಯ ಹಡಿಲು ಭೂಮಿ ಕೃಷಿ ನಾಟಿ ಕಡೇ ನಟ್ಟಿ (ಆಂದೋಲನದ ಸಮಾರೋಪ) ಸಾಮಾಜಿಕ ಕ್ಷೇತ್ರದ ಪ್ರಮುಖರ ಕೂಡುವಿಕೆಯಲ್ಲಿ ನಡೆಯಿತು.

ಶ್ರೀ ನಳಿನ್ ಕುಮಾರ್ ಕಟೀಲ್ ಸಂಸದರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ, ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಕರ್ನಾಟಕ, ಶ್ರೀ ಎಚ್.ಎಸ್ ಬಲ್ಲಾಳ್ ಸಹ ಕುಲಾಧಿಪತಿಗಳು ಮಾಹೆ , ಮಣಿಪಾಲ, ಶ್ರೀ ದಿಲೀಪ್ ರಾಜ್ ಹೆಗ್ಡೆ ಅಧ್ಯಕ್ಷರು ಗಣೇಶೋತ್ಸವ ಸಮಿತಿ, ಪರ್ಕಳ, ಶ್ರೀನಿವಾಸ ಉಪಾಧ್ಯಾಯ ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪರ್ಕಳ, ಶ್ರೀ ದಿನಕರ್ ಶೆಟ್ಟಿ ಹೆರ್ಗ ಅಧ್ಯಕ್ಷರು ಹೆರ್ಗ ಸೇವಾ ಸಹಕಾರಿ ಸಂಘ, ಶ್ರೀ ಜಯರಾಜ್ ಹೆಗ್ಡೆ ಆಡಳಿತ ಮೊಕ್ತೇಸರರು ವೈಷ್ಣವಿ ದುರ್ಗಾ ದೇವಸ್ಥಾನ, ಶ್ರೀ ಸುಧೀರ್ ಶೆಟ್ಟಿ ಕೀರ್ತಿ ಕನ್ಸ್ಟ್ರಕ್ಷನ್, ಶ್ರೀ ರಮೇಶ್ ಪಲ್ವಂಕರ್ ಆಡಳಿತ ಮೊಕ್ತೇಸರರು ಶ್ರೀ ನರಸಿಂಹ ದೇವಸ್ಥಾನ ಇವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ನಾಟಿ ಮಾಡುವ ಯಂತ್ರವನ್ನು ಚಲಾಯಿಸಿ ಬಳಿಕ ಟ್ರಾಕ್ಟರ್ ಚಲಾಯಿಸುವ ಮೂಲಕ ಕೃಷಿ ಕಾರ್ಯವನ್ನು ಬೆಂಬಲಿಸಿ ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು.

ಹಡಿಲು ಭೂಮಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ಯಾಮಲಾ ಕುಂದರ್, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ನಗರ ಬಿಜೆಪಿ ಅಧ್ಯಕ್ಷರು ಕೇದಾರೋತ್ಥಾನ ಟ್ರಸ್ಟ್ ನ ಸದಸ್ಯರಾದ ಮಹೇಶ್ ಠಾಕೂರ್, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ್, ವಿಜಯಲಕ್ಷ್ಮಿ, ಕಲ್ಪನಾ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!