ಕರಾವಳಿ

ಮಾಹೆ: ನಿರ್ದೇಶಕ ದಿನೇಶ್ ಶೆಣೈ ಚೊಚ್ಚಲ ಚಲನಚಿತ್ರ ‘ಮಧ್ಯಂತರ ಪ್ರದರ್ಶನ

ಮಣಿಪಾಲ: ಬರಹಗಾರ ಮತ್ತು ನಿರ್ದೇಶಕ ದಿನೇಶ್ ಶೆಣೈ
ಚೊಚ್ಚಲ ಚಲನಚಿತ್ರ’ಮಧ್ಯಂತರ ಮಾಹೆಯ ಗಾಂಧಿಯನ್
ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್
ನಲ್ಲಿ ಪ್ರದರ್ಶನಗೊಂಡಿತು.

ಮಾಹೆ ಪರಿಸರದಲ್ಲಿ ಬೆಳೆದ, ಸದ್ಯ ದೆಹಲಿಯಲ್ಲಿ ವಾಸಿಸುತ್ತಿರುವ ಶೆಣೈ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಬದುಕನ್ನು ಅವಲೋಕಿಸುವುದು ಮತ್ತು ವೈವಿಧ್ಯಮಯ ಚಲನಚಿತ್ರಗಳನ್ನು ನೋಡುವುದುಉತ್ತಮ ಚಲನಚಿತ್ರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.’

ಮಧ್ಯಂತರ’ದಲ್ಲಿನ ಹೆಚ್ಚಿನ ವಿವರಗಳು ಸಿನಿಮಾದೊಂದಿಗಿನ ಅವರ ಎರಡು ದಶಕಗಳಿಗೂ ಹೆಚ್ಚಿನ ಒಡನಾಟದ ಸಮಯದಲ್ಲಿನ ಅವಲೋಕನ ಮತ್ತು ಅನುಭವದಿಂದ ಜನಿಸಿದವುಗಳಾಗಿವೆ ಎಂದರು.

ತಮ್ಮ ಬಾಲ್ಯದ ದಿನಗಳಿಂದಲೂ ಸಿನಿಮಾದ ಮೇಲಿನ ಉತ್ಸಾಹವನ್ನು ನೆನಪಿಸಿಕೊಂಡ ಅವರು ಈ ಚಿತ್ರ ಮಾಡಲು ಅದು ಹೇಗೆ ಸೂರ್ತಿ ನೀಡಿತು ಎಂದು ಸ್ಮರಿಸಿದರು.

ಶೆಣೈ ಅವರು ಈ ಹಿಂದೆ ವೆಸ್ ಆಂಡರ್ಸನ್, ಆಡ್ರಿಯನ್
ಬ್ರಾಡಿ, ಮೊಹೈನ್ ಮಖಲ್ಟಾಫ್, ಅಮೀರ್ ಖಾನ್,
ಅಶುತೋಷ್ ಗೋವಾರಿಕರ್ ಅಂತಹ ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ
ಎನ್ನುತ್ತಾ ಚಿತ್ರದ ಲೈಟಿಂಗ್, ಸೆಟ್, ಡಿಸೈನ್, ತಾರಾಗಣದ
ಆಯ್ಕೆ, ಲೊಕೇಶನ್ ಹೀಗೆ ನಾನಾ ತಾಂತ್ರಿಕತೆಗಳನ್ನು
ವಿವರಿಸಿದರು.

ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯ ಕುರಿತಾದ
ಕಿರುಚಿತ್ರವಾಗಿರುವ’ಮಧ್ಯಂತರ’ ವಿದ್ಯಾರ್ಥಿಗಳು ಮತ್ತು
ಇತರರ ಮೆಚ್ಚುಗೆಗೆ ಪಾತ್ರವಾಯಿತು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮತ್ತು ಪತ್ರಕರ್ತ ಜಿ.ವಿಷ್ಣು ಸಂವಾದ ಕಾರ್ಯಕ್ರಮವನ್ನು
ನಿರ್ವಹಿಸಿದರು.

ಜಿಸಿಪಿಎಎಸ್ ಫಿಲ್ಸ್ ಕ್ಲಬ್ ಸಂಯೋಜಕ ಸಂಪದ ಭಾಗವತ್, ಶ್ರವಣ್ ಬಾಸ್ತ್ರಿ, ಆಲಿಸ್ ಚೌಹಾಣ್ ಕಾರ್ಯಕ್ರಮವನ್ನು ಆಯೋಜಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!