ತಾಜಾ ಸುದ್ದಿಗಳುರಾಜ್ಯ

ಖ್ಯಾತ ನಟನ ಬಂಧನ ; ಯುವತಿಯೊಂದಿಗೆ ಅಸಭ್ಯ ವರ್ತನೆ.!!

ಮುಂಬೈ: ಹಿಂದಿ ಧಾರಾವಾಹಿಗಳ ನಟ ಪ್ರಾಚೀನ್ ಚೌಹಾಣ್​ರನ್ನು ಕುಡಿದ ಅಮಲಿನಲ್ಲಿ ಯುವತಿಯೊಬ್ಬಳ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪದಲ್ಲಿ ಬಂಧಿಸಲಾಗಿದೆ.

ಪ್ರಾಚೀನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿಗೆ ಸಂತ್ರಸ್ತೆ ಆಕೆಯ ಸ್ನೇಹಿತೆಯೊಂದಿಗೆ ಹೋಗಿದ್ದಾಗ ಪ್ರಾಚೀನ್ ಅಸಭ್ಯವಾಗಿ ವರ್ತಿಸಿದ್ದಾಗಿ ಹೇಳಲಾಗಿದೆ. ಅಲ್ಲಿಂದ ಮನೆಗೆ ತೆರಳಿದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಲಾಗಿದೆ. ಸೆಕ್ಷನ್​ 354, 323, ಹಾಗೂ 506 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!