ಕಾರ್ಕಳ ತಾಲೂಕಿನ ಒಂದು ಲಕ್ಷ ಜನರಿಂದ ಕೋಟಿ ಕಂಠ ಗಾಯನ
ಕಾರ್ಕಳ:ರಾಜ್ಯೋತ್ಸವದ ಅಂಗವಾಗಿ ಈ ಬಾರಿ ಅ.28 ರಂದು ಕೋಟಿ ಕಂಠ ಗೀತಗಾಯನ ನೆಲ, ಜಲ, ಆಕಾಶ ಸೇರಿ ಎಲ್ಲೆಡೆಯೂ ವಿವಿಧ ಸ್ತರಗಗಲ್ಲಿ ಆಯೋಜನೆ ಮಾಡಲಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ 50 ಸಾವಿರ ಮಂದಿ ಗೀತೆ ಹಾಡಲಿದ್ದು, ಮುಖ್ಯಮಂತ್ರಿ, ಸಚಿವ ಸಂಪುಟದವರರು ಪಾಲ್ಗೊಳ್ಳಲಿದ್ದಾರೆಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ ತಾ.ಪಂ. ಕಚೇರಿಯಲ್ಲಿ ರವಿವಾರ ಕೋಟಿ ಗೀತಾ ಗಾಯನ ಸಂಬಂಧ ಇಲಾಖೆ ಅಧಿಕಾರಿಗಳ, ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಅವರು ಮಾತಾಡಿದರು.
ಕರ್ನಾಟಕ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೆ ಕನ್ನಡ , ಕನ್ನಡದ ಭಾವನೆ, ಸಾಹಿತ್ಯ, ಕನ್ನಡದ ಮನಸ್ಸುಗಳು ಇದೆಲ್ಲವೂ ವರ್ಷ ಪೂರ್ತಿ ವಿವಿಧ ಚಟುವಟಿಕೆಗಳಿಂದ ಕೂಡಿರಬೇಕು ಎನ್ನುವುದಕ್ಕೆ ಗೀತಗಾಯನ ಜೋಡಿಸಲಾಗಿದೆ.. 10 ಸಾವಿರ ಕಡೆಗಳಲ್ಲಿ 1ಕೋಟಿ ಜನ ಗೀತೆ ಗಾಯನ ನಡೆಸಲಿದ್ದಾರೆ.
ಜಗತ್ತಿನದ್ಯಾಂತ ಕನ್ನಡದ ಭಾವನೆಗಳನ್ನು ಒಂದುಗೂಡಿಸುವುದೇ ಇದರ ಮೂಲ ಆಶಯ. ಒಂದೇ ದಿನ ಏಕಕಾಲದಲ್ಲಿ ಆರು ಕನ್ನಡ ಹಾಡು ಹಾಡಲಾಗುತ್ತದೆ. ಏಕಾಕಾಲದಲ್ಲಿ 1 ಕೋಟಿ ಹಾಡು ಹಾಡುವುದು ಐತಿಹಾಸಿಕ ದಾಖಲೆಯಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕರ ಸಹಕಾರದೊಂದಿಗೆ ವ್ಯವಸ್ಥಿತ ಪೂರ್ವ ಸಿದ್ದತೆಯೊಂದಿಗೆ ನಡೆಸಬೇಕಿದೆ ಎಂದ ಅವರು ಕನ್ನಡಿಗರಿರುವ ಎಲ್ಲ ಕಡೆಗಳಲ್ಲಿಯೂ ಹಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ 50 ಕಡೆ ಯುನಿಕ್ ಕಾರ್ಯಕ್ರಮ ಆಯೋಜಿಸಿದ್ದೇವೆ. ಯೋಧರು ಕೂಡ ಈ ಬಾರಿ ಕನ್ನಡ ಗೀತೆ ಹಾಡಲಿದ್ದಾರೆ. ವಿಮಾನ ಟೇಕ್ ಆಪ್ ಆಗುವ ವೇಳೆ ಅಲ್ಲಿಯೂ ಮೊಳಗಲಿದೆ. ವಿಧಾನ ಸೌಧದ ಮೆಟ್ಟಿಲಲ್ಲಿ ಐಎಎಸ್ ಅಧಿಕಾರಿಗಳು, ಪೌರ ಕಾರ್ಮಿಕರು ಹೀಗೆ ಎಲ್ಲರೂ ಎಲ್ಲೆಡೆಯೂ ಪ್ರಮುಖ ಕೇಂದ್ರಗಳಲ್ಲಿ ಹಾಡಲಿದ್ದಾರೆ ಎಂದರು.
ಕಾರ್ಕಳ ತಾಲೂಕಿನ 1 ಲಕ್ಷ ಜನ ಗೀತೆ ಹಾಡುವ ನೀರಿಕ್ಷೆಯಿಂದ ಜಿಲ್ಲೆ ಮತ್ತು ತಾಲೂಕಿನಲ್ಲಿ ಸಿದ್ದತೆ ನಡೆಸಬೇಕಿದೆ. ಅಂದು ಬೆಳಗ್ಗೆ 11 ಕ್ಕೆ ಆರು ಹಾಡುಗಳನ್ನು ಹಾಡಲಾಗುತ್ತದೆ. ಸರಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಗಳು, ಕೈಗಾರಿಕೆಯಲ್ಲಿ ಇರುವವರೆಲ್ಲರೂ ಸಹಭಾಗಿಗಳಾಗಿ ಯಶಸ್ವಿಗೊಳಿಸಬೇಕು ಎಂದರು.
ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ತಾ.ಪಂ. ಇಒ ಗುರುದತ್ತ್, ಹೆಬ್ರಿ ಇಒ ಶಶಿಧರ್, ಡಿವೈಎಸ್ಪಿ ವಿಜಯಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ, ವಿವಿಧ ಇಲಾಖಾಧಿಕಾರಿಗಳು, ಉಪಸ್ಥಿತರಿದ್ದರು.