ರಾಷ್ಟ್ರೀಯ

ಶಾಲಾ ಬಸ್ ನಲ್ಲಿ ಅಡಗಿ ಕುಳಿತ ಬೃಹತ್ ಗಾತ್ರದ ಹೆಬ್ಬಾವು

ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಶಾಲಾ ಬಸ್ ನಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಅಡಗಿ ಕುಳಿತ ಘಟನೆ ನಡೆದಿದೆ.

ಈ ಬೃಹತ್ ಗಾತ್ರದ ಹೆಬ್ಬಾವು ರಾಯ್ ಬರೇಲಿಯ ರಿಯಾನ್ ಪಬ್ಲಿಕ್ ಸ್ಕೂಲ್‌ನ ಬಸ್‌ನ ಸೀಟಿನ ಕೆಳಗೆ ಕುಳಿತಿತ್ತು.ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹೆಬ್ಬಾವನ್ನು ಬಸ್ ನಿಂದ ಹೊರಕ್ಕೆ ತೆಗೆದು ರಕ್ಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸಿಕ್ಕಿಬಿದ್ದ ಹೆಬ್ಬಾವಿನ ತೂಕ ಸುಮಾರು 80 ಕೆಜಿ ಮತ್ತು ಅದರ ಉದ್ದ 11ವರೆ ಅಡಿ. ಅವರನ್ನು ಸುರಕ್ಷಿತವಾಗಿ ಡಾಲ್ಮೌ ಅರಣ್ಯದಲ್ಲಿ ಬಿಡಲಾಗಿದೆ.

ಹೆಬ್ಬಾವನ್ನು ಸುಮಾರು ಒಂದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ಹೇಗೋ ಹತೋಟಿಗೆ ತರಲಾಯಿತು.ಅದೃಷ್ಟವಶಾತ್ ಭಾನುವಾರವಾದ್ದರಿಂದ ಶಾಲೆ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!