ಕೇರಳದ ಕಾರಗ್ರಹದಿಂದ ತಪ್ಪಿಸಿಕೊಂಡಿದ್ದ ಕೊಲೆ, ಅತ್ಯಾಚಾರ ಪ್ರಕರಣದ ಜೀವಾವಧಿ ಶಿಕ್ಷೆ ಯಾಗಿದ್ದ ಆರೋಪಿಯನ್ನು ಬಂಧಿಸಿದ ಖಾಕಿ ಪಡೆ.

ಬ್ರಹ್ಮಾವರ : ಕೇರಳ ರಾಜ್ಯದ ತಿರುವಂತಪುರo ಗ್ರಾಮಾಂತರ ಜೆಲೆಯ ವಾಟಿಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ರಾಜೇಶ (39) ತಂದೆ ಮೋಹನ ವಾಸ ಕ್ರಿಸ್ಟ್ ಭವನ ವೀರನ ಕಾವು ಗ್ರಾಮ ಕಟ್ಟಕಡೆ ನಯತಿನಕಾರ ತಾಲೂಕು ತಿರುವಂತಪುರಂ ಜಿಲ್ಲೆ. ಎಂಬಾತನು ಬಂದಿತನಾಗಿದ್ದು. ಸದ್ರಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿರುತ್ತಾರೆ.
ಸದ್ರಿ ಆರೋಪಿಯು ತಿರುವಂತಪುರಂ ಕೇಂದ್ರ ಕಾರಾಗೃಹದಲ್ಲಿ ಇದ್ದವನನ್ನು ನಂತರ ನೆಟ್ಟು ಕತಾರಿ ಬಯಲು ಜೈಲ್ ಗೆ ವರ್ಗಾಯಿಸಿದ್ದು ದಿನಾಂಕ 23/12/2020 ರಂದು ನೆಟ್ಟು ಕತಾರಿ: ಬಯಲು ಜೈಲ್ ನಿಂದ ಪರಾರಿಯಾಗಿರುತ್ತಾನೆ.
ಈ ಬಗೆ, ನೇಯಾರ್ ಏಮ್ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಾಲಾಗಿದು ಆರೋಪಿ ರಾಜೇಶ ಎರಡು ವರ್ಷಗಳಿಂದ ತಲೆಮರೆಸಿಕೊಂಡಿರುತ್ತಾನೆ.
ಆರೋಪಿ 2012 ರಲ್ಲಿ, ಕೇರಳ ರಾಜ್ಯದ ಅಪ್ರಾಪ್ತಯ ಕೊಲೆ ಹಾಗೂ ಅತ್ಯಾಚಾರದ ಅತಿ ಪ್ರಮುಖ ಪ್ರಕರಣದ ಆರೋಪಿತವಾಗಿದ್ದು ಮಾನು ನ್ಯಾಯಾಲಯವು ತ್ವರಿತ ಗತಿಯ ವಿಚಾರಣೆ ನಡೆಸಿ 2013 ರಲ್ಲಿ ಗಲ್ಲು , ಶಿಕ್ಷೆ ವಿಧಿಸಿದ್ದು ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡಾಗಿರುತ್ತದೆ. ಸದ್ರಿ, ಆರೋಪಿ ಉಡುಪಿಯಲಿ ವಾಸವಾಗಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ ಎಂ. ಹೆಚ್ ಐ.ಪಿ.ಎಸ್ ಮಾರ್ಗದರ್ಶನದಂತೆ, ಶ್ರೀ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರರವರ ನೇತೃತ್ವದ ತಂಡ ಸದ್ರಿ ಪ್ರಕರಣದ ಆರೋಪಿಯನ್ನು ಕಬ್ಬಿನ ಹಿತ್ಲು ನೈಲಾಡಿ ಬಿಲ್ಲಾಡಿ ಗ್ರಾಮ ಬ್ರಹ್ಮಾವರ ತಾಲೂಕು ಎಂಬಲ್ಲಿ ವಶಕ್ಕೆ ಪಡೆದು ಕೇರಳ ಪೊಲೀಸ್ ರಿಗೆ ಮಾಹಿತಿ ನೀಡಲಾಗಿರುತ್ತದೆ. ಕೇರಳ ಪೊಲೀಸ್ ರು ಈ ದಿನ ಆರೋಪಿ ರಾಜೇಶನನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಕ್ಕೆ ಹಾಜರು ಪಡಿಸಿ ನ್ಯಾಯಾಲಯದ ಆದೇಶ ಪಡೆದು ಕೇರಳಕ್ಕೆ ಕರೆದುಕೊಂಡು ಹೋಗಿರುತ್ತಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಮ್.ಹೆಚ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ, ಪೊಲೀಸ್ ಉಪಾಧೀಕ್ಷಕರು, ಉಡುಪಿ ವಿಭಾಗ, ರವರ ನಿರ್ದೇಶನದಂತೆ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಕೋಟ ಠಾಣೆಯ ತನಿಖಾ ವಿಭಾಗದ ಪಿ.ಎಸ್.ಐ ಪುಷಾ, ಪ್ರೊ. ಪಿ.ಎಸ್.ಐ, ನೂತನ್ ಡಿ. ಎ.ಎಸ್.ಐ, ಜೊಶ್, ಕೋಟ ಪೊಲೀಸ್ ಠಾಣಾ ಎ ಎಸ್ಐ ರವಿ ಕುಮಾರ್, ಸಿಬ್ಬಂದಿಯವರಾದ ರಾಘವೇಂದ್ರ ಪ್ರಸನ್ನ, ವಿಜಯೇಂದ್ರ ಮಂಜುನಾಥ ಅಸಂಗಿ, ವಿಠಲ, ಉಳುವಪ್ಪ ಹಾಗೂ ಬ್ರಹ್ಮಾವರ ವೃತ್ರ ಕಛೇರಿಯ ರವಿ, ಕೃಷ್ಣ ಶೇಖರ ಹಾಗೂ ಹೋಮ್ ಗಾರ್ಡ್ ವಿಜಯ ರವರುಗಳು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಮಚೀಂದ್ರ ಐಪಿಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.