ಇಂದ್ರಾಳಿ ರಸ್ತೆ ಕಾಮಗಾರಿ: ಘನ ವಾಹನಗಳಿಗೆ ಪರ್ಯಾಯ ಮಾರ್ಗ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಕಿ.ಮೀ 76.040 ರಿಂದ ಕಿ.ಮೀ 85.200 ವರೆಗೆ ಚತುಷ್ಪಥ ಕಾಮಗಾರಿ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಬಾಕಿ ಇರುವ ಕಾಂಕ್ರೀಟೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇಂದ್ರಾಳಿ ರೇಲ್ವೆ ಸೇತುವ ಮೂಲಕ ಭಾರೀ ವಾಹನ ಸಂಚಾರವನ್ನುbಕಡ್ಡಾಯವಾಗಿ ನಿರ್ಬಂಧಿಸಿದ್ದು, ವಾಹನಗಳ ದಟ್ಟಣಿಕೆಯಿಂದ ಸುಗಮ ಸಂಚಾರಕ್ಕೆ ಉಳಿದ
ವಾಹನಗಳಿಗೆ ಅಡಚಣೆಯಗುತ್ತಿರುವ ಹಿನ್ನಲೆ ಇತರ
ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕೆಂದು ಸೂಚಿಸಲಾಗಿದೆ.
ಕುಂದಾಪುರ ಕಡೆಯಿಂದ ಬರುವ ಘನವಾಹನಗಳು
ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆಯ ಮೂಲಕ
ಚಲಿಸುವುದು, ಉಡುಪಿಯಿಂದ ಬರುವ ಘನವಾಹನಗಳು
ಕಲ್ಸಂಕ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುಂಡಿಬೈಲ್
ರಸ್ತೆ ಮೂಲಕ ಎ.ವಿ ಬಾಳಿಗ ಆಸ್ಪತ್ರೆ ಬಳಿಯಿಂದ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲಕ್ಕೆ ಚಲಿಸುವುದು, ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ- ಪರಂಪಳ್ಳಿ-ಅಂಬಾಗಿಲು ರಸ್ತೆಯ ಮೂಲಕ ಚಲಿಸುವುದು, ಉಡುಪಿಯಿಂದ ಮಣಿಪಾಲಕ್ಕೆ ಚಲಿಸುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಹಾಲಿ ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ