ಉಡುಪಿ ರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಸಹಕಾರಿ (ನಿ.) ಉದ್ಘಾಟನಾ ಸಮಾರಂಭ

ಉಡುಪಿ ರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಸಹಕಾರಿ (ನಿ.) ಉದ್ಘಾಟನಾ ಸಮಾರಂಭ ಇಂದು ದಿನಾಂಕ 27-12-2021 ರಂದು ಸ್ವಾತಿ ರೆಸಿಡೆನ್ಸಿ ಗುಂಡಿಬೈಲಿನಲ್ಲಿ ನಡೆಯಿತು. ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ, ನಗರ ಸಭಾ ಸದಸ್ಯರಾದ ಗೀತಾ ಶೇಟ್, ಬಾಲಕೃಷ್ಣ ಶೆಟ್ಟಿ, ಮಾನಸ ಪೈ, ಅಶೋಕ್ ನಾಯ್ಕ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ ಎಸ್.ಕೆ, ನ್ಯಾಯವಾದಿಗಳು ಹಾಗೂ ಕಾರ್ಕಳ ತಾಲೂಕು ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅನಂತ ಎಸ್. ನಾಯ್ಕ್, ಉಡುಪಿ ರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷರಾದ ಸುರೇಶ್ ಅಮೀನ್, ಉಪಾಧ್ಯಕ್ಷರಾದ ಸಂತೋಷ್ ರಾವ್ ಕಾರ್ಕಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೃಷ್ಣ ಕುಲಾಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.