ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿದ ವಿಧ್ಯಾರ್ಥಿನಿ

ಸುರತ್ಕಲ್ : ಎಂಬಿಬಿಎಸ್ ವಿಧ್ಯಾರ್ಥಿನಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿದ ಘಟನೆ ನಡೆದಿದೆ.
ರಾಜಸ್ಥಾನ ಮೂಲದ ಪ್ರಸ್ತುತ ಚೆನ್ನೈನಲ್ಲಿ ಎಂಬಿಬಿಎಸ್ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿನಿ ರೇಶು ಎಂಬಾಕೆ ಓಡಿ ಬಂದ ವಿಧ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಚೆನ್ನೈ ನಿಂದ ರೇಶು ಯುವಕನ ಹುಡುಕಿಕೊಂಡು ಸುರತ್ಕಲ್ ಗೆ ತಲುಪಿದ್ದಾಳೆ.ಸುರತ್ಕಲ್ ಗೆ ಬರುವಾಗ ಬ್ಯಾಗ್, ಮೊಬೈಲ್ ಕಳದ್ದರಿಂದ ಆಕೆಗೆ ದಿಕ್ಕು ತೋಚದಂತೆ ಆಗಿ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ನಿಂತು ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಲು ಯೋಚಿಸಿ ಅಂಗಡಿ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದ್ದಾಳೆ.
ಸ್ಥಳೀಯ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆಯ ಉಮೇಶ್ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ,ಕೇಶವ ,ನಾಗೇಶ್ ಕಾನಾ ಅವರಿಗೆ ಯುವತಿಯ ಬಗ್ಗೆ ಸಂಶಯ ಮೂಡಿ ವಿಚಾರಿಸಿದಾಗ ದಾರಿ ತಪ್ಪಿ ಬಂದಿರುವ ಶಂಕೆ ವ್ಯಕ್ತವಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲು ನೆರವಾದರು.
ಸ್ಥಳೀಯ ಸಂಸ್ಥೆಯ ಎಂಜಿನಿಯರ್ ವಿದ್ಯಾರ್ಥಿಗೆ ಪರಿಚಯವಿಲ್ಲ ಎಂಬುದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ತಿಳಿದು ಬಂತು.ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋದ ಬಗ್ಗೆ ಮಾಹಿತಿ ತಿಳಿದು ಬಂದಿದೆ.