ಕರಾವಳಿ
ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಯುವಕ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿ ಗುರುವಾರ ಯುವಕನೋರ್ವ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನೇರೊಳ್ದಪಲಿಕೆ ಎಂಬಲ್ಲಿನ ನಿವಾಸಿ ಚರುಂಬೆ ಎಂಬವರ ಪುತ್ರ ಬಾಬು (34) ಮೃತಪಟ್ಟವರಾಗಿದ್ದಾರೆ.
ಪಿಲಿಚಂಡಿಕಲ್ಲು ಸಮೀಪದ ಮಂಜುಬೆಟ್ಟುವಿನ ತಾಯಿಯ ಅಕ್ಕನ ಮನೆಗೆ ತನ್ನ ತಾಯಿಯೊಂದಿಗೆ ಬಂದಿದ್ದರು.ದೊಡ್ಡಮ್ಮನ ಮನೆಯ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಫಿಟ್ಸ್ ಖಾಯಿಲೆ ಶುರುವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.ಬೆಳ್ತಂಗಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.