ಕರಾವಳಿ
ಸಬ್ ಜೈಲಿಗೆ ಕರೆದೊಯ್ಯುವಾಗ ಜೈಲ್ ಸಮೀಪ ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ

ಕುಂದಾಪುರ: ಕೆಲ ತಿಂಗಳ ಹಿಂದೆ ಬೀಜಾಡಿ ಸಮೀಪದಲ್ಲಿ ಮೊಬೈಲ್ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿತ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಮೊಬೈಲ್ ಅಂಗಡಿಯಲ್ಲಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದರು.
ಗುರುವಾರ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದರಿಂದ ಹಿರಿಯಡ್ಕದ ಸಬ್ ಜೈಲಿಗೆ ಕರೆದೊಯ್ಯುವಾಗ ಜೈಲ್ ಸಮೀಪದಿಂದ ಆರೋಪಿ ಇಬ್ಬರು ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.
ಪರಾರಿಯಾದ ಆರೋಪಿ ಭಟ್ಕಳ ಮೂಲದ ಮೊಹಮ್ಮದ್ ರಾಹಿಕ್ , ಸದ್ಯ ಪರಾರಿಯಾದ ಆರೋಪಿ ರಾಹಿಕ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.