ಕರಾವಳಿ
ಇಸ್ಕಾನ್ ದೇವಸ್ಥಾನದ ನೂತನ ಮುಖ್ಯ ಸ್ವಾಮೀಜಿ ಶ್ರೀ ಗುಣಾಕರ ರಾಮ ದಾಸ ಇವರಿಗೆ ಗೌರವಾರ್ಪಣೆ

21 ಅಕ್ಟೋಬರ್ 2022 ರಂದು ಮಂಗಳೂರು ಕೇಂದ್ರದ ಕೃಷ್ಣಾ ಬಲರಾಮರ ಇಸ್ಕಾನ್ ದೇವಸ್ಥಾನದ ನೂತನ ಮುಖ್ಯ ಸ್ವಾಮೀಜಿ ಶ್ರೀ ಗುಣಾಕರ ರಾಮ ದಾಸ ಇವರಿಗೆ ಭಕ್ತರ ಪರವಾಗಿ ಶ್ರೀ ಸಿ ಎ ಎಸ್ ಎಸ್ ನಾಯಕ್ ರವರು ಹೂ ಹಣ್ಣು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗುಣಾಕರ ರಾಮ ದಾಸರು ಕಾರ್ತಿಕ ಮಾಸದಲ್ಲಿ ಶ್ರೀ ಕೃಷ್ಣಾ ದೇವರ ಸನ್ನಿದಿಯಲ್ಲಿ ಪೂಜೆ, ಭಜನೆ ಆರಾಧನೆಯು ನಡೆಯುತ್ತದೆ ಎಂದು ತಿಳಿಸಿದರು ಹಾಗೂ ಪೂಜೆಯ ಮಹತ್ವವನ್ನು ವಿವರಿಸಿದರು ಮತ್ತು ಸಮಾಜದ ಕಲ್ಯಾಣಕ್ಕೆ ಹಾರೈಸಿದರು. ಎಸ್ ವಿ ಕನ್ಸಲ್ಟೆನ್ಸಿ ಸಂಸ್ಥೆಯ ಮಾಲಕರಾದ ಶ್ರೀ ಜಿ ಯೋಗೇಶ್ ಪೈ ಹಾಗೂ ಬಜಾಜ್ ಅಲಯನ್ಸ್ ವಿಮಾ ಕಂಪನಿಯ ಮಂಗಳೂರು ವಲಯದ ಮುಖ್ಯಸ್ಥ ಶ್ರೀ ಬಿ ದಾಮೋದರ್ ಬಾಳಿಗಾ ರವರು ಉಪಸ್ಥಿತರಿದ್ದರು.