ಕರಾವಳಿ
ಮುಂಡ್ಕೂರು: ಅಕ್ರಮ ಮರಳು ದಂಧೆ : ಗ್ರಾಮಸ್ಥರ ತಡೆ.

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪೊಸ್ರಾಲ್ ಶೆಟ್ಟಿಬೆಟ್ಟು ಎಂಬಲ್ಲಿಯ ಶಾಂಭವಿ ನದಿಯಲ್ಲಿ ರಾತ್ರಿ-ಹಗಲೆನ್ನದೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದ್ದು, ಸ್ಥಳೀಯರು ಇದರಿಂದ ತೊಂದರೆ ಅನುಭವಿಸುತ್ತಿದ್ದರು ಎನ್ನಲಾಗಿದೆ.
ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಭಾನುವಾರ ಮುಂಜಾನೆ ಅಕ್ರಮ ಮರಳುಗಾರಿಕೆಗೆ ಮುತ್ತಿಗೆ ಹಾಕಿ ಮರಳನ್ನು ಸಾಗಿಸಲು ಬಂದ ಟಿಪ್ಪರ್ ಲಾರಿಯನ್ನು ಹಾಗೂ ಮರಳನ್ನು ತೆಗೆಯುತ್ತಿದ್ದ ಎರಡು ದೋಣಿಯನ್ನು ತಡೆದು ನಿಲ್ಲಿಸಿ, ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಕ್ರೈಂ ಎಸ್ ಐ ಜನಾರ್ಧನ್, ಎ ಎಸ್ ಐ ರಾಘು ಹಾಗೂ ಸಿಬ್ಬಂದಿಗಳು ಮರಳು ಸಾಗಾಟಕ್ಕೆ ಬಂದ ಟಿಪ್ಪರ್ ವಶಪಡಿಸಿಕೊಂಡಿದ್ದು, ಎರಡು ಮರಳು ತುಂಬಿದ ದೋಣಿಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸುವುದಾಗಿ ತಿಳಿಸಿರುತ್ತಾರೆ.