ಯುಕೆ ಪ್ರಧಾನಿಯಾಗಿ ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಆಯ್ಕೆ!

ಲಂಡನ್: ಯುನೈಟೆಡ್ ಕಿಂಗ್ಡಮ್ನ ಪ್ರಧಾನಿಯಾಗಿ
ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಶಿ ಸುನಕ್
ಆಯ್ಕೆಯಾಗಿದ್ದಾರೆ.
ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ವಿಶ್ವದಲ್ಲೇ ಶುರುವಾಗಿತ್ತು. ಇದೀಗ ಉತ್ತರ ಸಿಕ್ಕಿದೆ. ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ, ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಬೊರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್ನಿಂದ ಹಿಂದೆ ಸರಿದ ಕಾರಣ ಸುನಕ್ ಹಾದಿ ಸುಗಮಗೊಂಡಿತು.
ಸುನಕ್ ವಿರುದ್ಧ, ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್ ಸ್ಪರ್ಧಿಸಿದ್ದರು. ಪೆನ್ನಿ ಮೋರ್ಡೆಂಟ್ ಕೇವಲ 26 ನಾಯರ ಬೆಂಬಲ ಪಡೆದರು. ಹೀಗಾಗಿ ಕಣದಿಂದ ಹೊರಬಿದ್ದರು. ಇದರೊಂದಿಗೆ ಭಾರಿ ಬಹುಮತದೊಂದಿದೆ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಸುನಕ್ ಯುಕೆಯ 57ನೇ ಪ್ರಧಾನ ಮಂತ್ರಿ ಅವರು
ಯುಕೆಯ ಮೊದಲ ಭಾರತ ಮೂಲದ ಪ್ರಧಾನ
ಮಂತ್ರಿಯೂ ಹೌದು. ರಿಷಿ ಸುನಕ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಮಗಳು ಅಕ್ಷತಾರನ್ನ
ವಿವಾಹವಾಗಿ ಬ್ರಿಟನ್ನಲ್ಲಿ ನೆಲೆಸಿದ್ದಾರೆ. ಇವರಿಗೆ ಕೃಷ್ಣ
ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.