ಕರಾವಳಿ

ಸೂರ್ಯಗ್ರಹಣ ಹಿನ್ನೆಲೆ ಉಡುಪಿ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಇಲ್ಲ

ಉಡುಪಿ :  ಇಂದು ಗ್ರಸ್ತಾಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ದೇವಾಲಯಗಳ ಪೂಜೆ ಮತ್ತು ಅನ್ನ ಸಂತರ್ಪಣೆಯಲ್ಲಿ ಬದಲಾವಣೆ ಮಾಡಲಾಗಿದೆ.
ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣಮಠ ಇಂದು ಕೂಡ ಎಂದಿನಂತೆ ತೆರೆದಿರುತ್ತದೆ. ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇದೆ.. ದೇವರ ಮಧ್ಯಾಹ್ನ ಪೂಜೆ ನಂತರ ದರ್ಬೆ ಇಡಲಾಗುತ್ತೆ. ಗ್ರಹಣ ಮೋಕ್ಷ ಕಾಲದಲ್ಲಿ ದರ್ಬೆ ತೆಗೆದು ಪೂಜೆ ಮಾಡಲಾಗುತ್ತೆ. ಭಕ್ತರಿಗೆ ಊಟ ವ್ಯವಸ್ಥೆ ಇರುವುದಿಲ್ಲ.

ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತಡೆ ಇಲ್ಲ. ಗ್ರಹಣ ಕಾಲದಲ್ಲಿ ಮೂಕಾಂಬಿಕಾ ದೇವಿಗೆ ಅಭಿಷೇಕ ನಡೆಯುತ್ತದೆ, ಭಕ್ತರಿಗೆ ಮಧ್ಯಾಹ್ನ ಊಟ ವ್ಯವಸ್ಥೆ ಇರುವುದಿಲ್ಲ.

ಇನ್ನು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ 3 ಗಂಟೆಯವರೆಗೆ ತೆರೆದಿರುತ್ತದೆ. ನಂತರ ಬಾಗಿಲು ಮುಚ್ಚಲಾಗುತ್ತದೆ. ಆದ್ರೆ ಹೊರ ಆವರಣದಲ್ಲಿ ಜಪತಪಕ್ಕೆ ಅವಕಾಶ ಇದೆ. ಉಚ್ಚಿಲ ಕ್ಷೇತ್ರದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆ ಇಲ್ಲ. ಗ್ರಹಣ ಕಾಲದಲ್ಲೇ ಸೂರ್ಯಾಸ್ತ ಆಗುವುದರಿಂದ ರಾತ್ರಿ ಪೂಜೆ ಇಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!