ಕರಾವಳಿ
ಮಣಿಪಾಲ ಕಾರ್ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಾತ ಅರೆಸ್ಟ್ : ಕಾರು ವಶಕ್ಕೆ

ಮಣಿಪಾಲ: ಕಾರಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಾತ ಅರೆಸ್ಟ್, ಕಾರು ವಶಕ್ಕೆ ಪಡೆದ ಘಟನೆ ಮಣಿಪಾಲದಲ್ಲಿ ನಡೆದಿದೆ. ಹಬ್ಬದ ಸಂದರ್ಭ ತನ್ನ ಕಾರಲ್ಲಿ ರಾಕೆಟ್ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದ ಕಾರು ಚಾಲಕನನ್ನು ಪತ್ತೆ ಹಚ್ಚಿರುವ ಪೊಲೀಸರು ಆತನನ್ನು ಬಂಧಿಸಿ ಕಾರನ್ನು ಸೀಜ್ ಮಾಡಿದ್ದಾರೆ.
ಈತ ಕಾರಿನ ಮೇಲೆ ಪಟಾಕಿ ಹಚ್ಚಿಕೊಂಡು ಮುಖ್ಯ ರಸ್ತೆಯಲ್ಲಿ ತಿರುಗಾಟ ನಡೆಸಿದ್ದ. ಕಾರಿನ ಮೇಲೆ ಪಟಾಕಿ ಸಿಡಿಯುವ ದೃಶ್ಯ ಸಾಮಾಜಿಕ ಜಾಲತಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾರ್ಯಚರಣೆಗಿಳಿದ ಮಣಿಪಾಲ ಪೊಲೀಸರು, ಕಾರಿನ ಚಾಲಕ ,ಮಣಿಪಾಲ ಸೆಲೂನ್ ಉದ್ಯೋಗಿ ವಿಶಾಲ್ ಕೊಹ್ಲಿ (26)ಯನ್ನು ಬಂಧಿಸಿದ್ದಾರೆ.
ಹುಚ್ಚಾಟ ಮೆರೆದಿದ್ದ ಚಾಲಕ ಕೊಹ್ಲಿ ಮೇಲೆ ಪ್ರಕರಣ ದಾಖಲು ಮಾಡಿರುವ ಪೊಲೀಸರು, ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ.