ಕರಾವಳಿ

ಪೊಲೀಸ್ ಫೈರಿಂಗ್ ರೆಂಜ್ ಮೈದಾನದಲ್ಲಿ”ಕೋಟಿ ಕಂಠ ಗಾಯನ”

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿಯವರಿಂದ ಕಾರ್ಯಕ್ರಮ ಉದ್ಘಾಟನೆ…

ಕೋಟಿ ಕಂಠ ಗಾಯನದ ಪ್ರಯುಕ್ತ ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಪ್ರಾದೇಶಿಕ ಅರಣ್ಯ ವಲಯ, ಕಾರ್ಕಳ ಸಾಮಾಜಿಕ ಅರಣ್ಯ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇವರ ಸಹಯೋಗದೊಂದಿಗೆ ನಕ್ರೆ ಪೋಲೀಸು ಫೈರಿಂಗ್ ರೆಂಜ್ ಮೈದಾನದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ಶ್ರೀ ಗಣಪತಿ ಇವರು ಕಾರ್ಯಕ್ರಮವನ್ನು ಉದ್ಭಾಟಿಸಿ ಕನ್ನಡ ನೆಲ, ಜಲದ ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೆರ್ವಾಜೆ ಶಾಲೆಯ ಶಿಕ್ಷಕ ವೃಂದ, ಮಕ್ಕಳು, ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಗಾಯನವನ್ನು ಅತ್ಯಂತ ಸುಮಧುರವಾಗಿ ಹಾಡಲಾಯಿತು. ಶ್ರೀ ಪ್ರಕಾಶ್ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಎಲ್ಲರಿಗೂ ಸಂಕಲ್ಪ ವಿಧಿಯನ್ನು ಭೋದಿಸಿದರು, ಕುಮಾರಿ ಕಾಜೋಲ್ ಪಾಟೀಲ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗದ ಎಲ್ಲಾ ವಲಯ ಅರಣ್ಯಾಧಿಕಾರಿಗಳು, ಕಚೇರಿ ಅಧೀಕ್ಷಕರಾದ ಶ್ರೀ ಹರಿಪ್ರಸಾದ್ ಹಾಗೂ ಸಿಬ್ಬಂದಿ ವರ್ಗ, ಕಾರ್ಕಳ ಪ್ರಾದೇಶಿಕ ವಲಯದ ಸಿಬ್ಬಂದಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಶ್ರಿ ಪ್ರಕಾಶ್ಚಂದ್ರ ಉಪ ವಲಯ ಅರಣ್ಯಾಧಿಕಾರಿಗಳು ಕಾರ್ಯಕ್ರಮವನ್ನು ನಿರೂಪಸಿ ವಂದಾನಾರ್ಪಣೆ ಸಲ್ಲಿಸಿದರು. ಈ ಎಲ್ಲಾ ಕಾರ್ಯಕ್ರಮವನ್ನು ಡ್ರೋಣ್ ಹಾಗೂ ಕ್ಯಾಮರ ಮುಖಾಂತರ ವಿಡಿಯೋ ಚಿತ್ರೀಕರಣ ನಡೆಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 125 ಜನರಿಗೆ ಲಘು ಉಪಹಾರವನ್ನು ನೀಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!