ರಾಜ್ಯ
ಮನೆಗೆ ನುಗ್ಗಿ 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳತನ : ಆರೋಪಿಯ ಬಂಧನ
ಬಂಟ್ವಾಳ : ಮಾ.9 ರಂದು ಇಡ್ಕಿದು ಗ್ರಾಮದ ಮಿತ್ತೂರು ಮನೆಯಲ್ಲಿ ಮನೆಯವರು ಇರುವಾಗಲೇ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳತನವಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಮಹಮ್ಮದ್ ಕೆ ಯುಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆಪಡೆಯಲಾಗಿದೆ.ಕಾಸರಗೂಡಿನಲ್ಲಿ ಕಳ್ಳತನವಾದ ಸ್ವತ್ತುಗಳನ್ನು ಮಾರಾಟ ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದ್ದು ಅದರಂತೆ ಕಳವು ಮಾಲನ್ನು ಕಾಸರಗೂಡಿನ ಜುವ್ಯೆಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಮಾನ್ಯ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.