ಬಾಯೋ ಆಮ್ಚೆ ಚೇಡು ಕೊಂಕಣಿ ಚಲನಚಿತ್ರದ ಟ್ರೈಲರ್ ಆಡಿಯೋ ಬಿಡುಗಡೆ.

ಮಂಗಳೂರು: ಆರ್. ಎಸ್. ಬಿ. ಕೊಂಕಣಿ ಭಾಷೆಯ ಅದ್ದೂರಿ ಚಲನಚಿತ್ರ ಕಾಮತ್ ಕ್ರಿಯೇಷನ್ಸ್ ರವರ ಬಾಯೋ ಆಮ್ಚೆ ಚೇಡು ಇದರ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಮಣಿಪಾಲದ ಭಾರತ್ ಸಿನಿಮಾಸ್ ನಲ್ಲಿ ಗಣ್ಯರು ಹಾಗೂ ಕಲಾವಿದರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ದೀಪ ಬೆಳಗಿಸಿ ನೆರವೇರಿಸಿದರು. ನಂತರ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ರೈಲರ್ ಬಿಡುಗಡೆಗೊಳಿಸಲಾಯಿತು. ಕನ್ನಡ, ತುಳು ಚಿತ್ರನಟ ಪೃಥ್ವಿ ಅಂಬಾರ್ ಅವರು ಆಡಿಯೋ ಬಿಡುಗಡೆ ಗೊಳಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು. ತದನಂತರ ಅತಿಥಿ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಡಾ. ಜಗದೀಶ್ ಪೈ, ಗೋಕುಲದಾಸ್ ನಾಯಕ್, ಅಶೋಕ್ ನಾಯಕ್ ಹಿರ್ಗಾನ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಶ್ರೀಕಾಂತ್ ನಾಯಕ್, ನವೀನ್ ನಾಯಕ್, ರವೀಂದ್ರ ಪ್ರಭು, ಕಡಾರಿ, ಮೋಹಿನಿ ಎನ್ ನಾಯಕ್, ಉಷಾ ನಾಯಕ್. ಮೊದಲಾದವರು ಉಪಸ್ಥಿತರಿದ್ದರು. ಸಿನಿಮಾ ನವೆಂಬರ್ 13ರಂದು ಭಾರತ್ ಸಿನಿಮಾಸ್ ಮಣಿಪಾಲ್ ಇಲ್ಲಿ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ.
ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಇಳಾ ವಿಟ್ಲಾ ವಿಗ್ನೇಶ್, ಸಹನಾ, ಶಿವಾಜಿರಾವ್, ಜಾದವ್, ವಿಜಯ್ ನಾಯಕ್, ಶ್ಯಾಮಲಾ ಕಶ್ಯಪ್, ರೇವತಿ, ಆಶಾ ನಾಯಕ್, ಸೌಜನ್ಯ ನಾಯಕ್, ಕುಸುಮ ಕಾಮತ್, ಶಿವಾನಂದ ನಾಯಕ್ ಇದ್ದಾರೆ. ಚಿತ್ರಕ್ಕೆ ರಾಹುಲ್ ವಸಿಷ್ಠ ಸಂಕಲನ ಮಾಡಿದ್ದಾರೆ. ಸುನಾದ್ ಗೌತಮ್ ಅವರ ಛಾಯಾಗ್ರಾಹಣ ಹಾಗೂ ಸಂಗೀತವಿದೆ. ನಿರ್ಮಾಪಕರು ರಂಜದಕಟ್ಟೆ ನಾಗೇಂದ್ರ ಕಾಮತ್, ನಿರ್ದೇಶಕರು ರಮಾನಂದ ನಾಯಕ್ ಜೋಡು ರಸ್ತೆ.