ರಾಜ್ಯ
ವಿವಾಹಿತ ಮಹಿಳೆ ನಾಪತ್ತೆ ದೂರು ದಾಖಲು.
ವಿಟ್ಲ: ಅಕ್ಟೋಬರ್ 29 ರಿಂದ ವಿವಾಹಿತ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾರೆ ಎಂದು ಆಕೆಯ ಮನೆಯವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದವರು ವಿಟ್ಲಪಟ್ನೂರು ಗ್ರಾಮದ ಕಡಂಬು ನಿವಾಸಿ ಕವಿತಾ ಎಂದು ಗುರುತಿಸಲಾಗಿದೆ.
ಕೆಲಸ ಮುಗಿಸಿ, ಸಂಜೆ ತಾಯಿ ಮನೆಗೆ ಹೋಗುತ್ತೇನೆಂದು ಬೆಳಗ್ಗೆ ಮನೆಯಲ್ಲಿ ಹೇಳಿದ್ದರು. ಆದರೆ ಆಕೆ ತಾಯಿ ಮನೆಗೆ ತೆರಳಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪರಿಸರದಲ್ಲಿ ಹುಡುಕಾಡಿದರೂ ಕವಿತಾ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.