ಕರಾವಳಿ

ನ.7- ಮಹಾಲಕ್ಷ್ಮೀ ಬ್ಯಾಂಕ್ ವಿಸ್ತರಿತ ಆಡಳಿತ ಕಚೇರಿ ಉದ್ಘಾಟನೆ: ಯಶ್‌ಪಾಲ್ ಎ. ಸುವರ್ಣ

ಉಡುಪಿ: ಉಡುಪಿಯ ಕಲ್ಮಂಜೆ ಟವರ್ಸ್ನ ದ್ವಿತೀಯ ಮಹಡಿಯ ಸ್ವಂತ ಕಟ್ಟಡದಲ್ಲಿನ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ನೂತನ ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನವೆಂಬರ್ 7 ರಂದು ಪೂರ್ವಾಹ್ನ 9 ಗಂಟೆಗೆ ಆಯೋಜಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಎ. ಸುವರ್ಣ ತಿಳಿಸಿದ್ದಾರೆ.

ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಿ ಅಶೀರ್ವಚಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಭಾಗವಹಿಸಲಿದ್ದು, ಬ್ಯಾಂಕಿನ ಗ್ರಾಹಕರು, ಗಣ್ಯರು
ಉಪಸ್ಥಿತರಿರಲಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕಳೆದ 45
ವರ್ಷಗಳಿಂದ ಗ್ರಾಹಕ ಸ್ನೇಹಿ ಬ್ಯಾಂಕಿಂಗ್ ಸೇವೆ ಹಾಗೂ
ನಿರಂತರ ಆರ್ಥಿಕ ಪ್ರಗತಿಯೊಂದಿಗೆ ಲಾಭದಾಯಕ ಸಹಕಾರಿ ಸಂಸ್ಥೆಯಾಗಿ ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 8 ಶಾಖೆಗಳ ಮೂಲಕ
ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ವ್ಯವಹಾರ
ನಡೆಸುತ್ತಿರುವ ಬ್ಯಾಂಕಿನ ಆಡಳಿತಾತ್ಮಕ ಚಟುವಟಿಕೆಗೆ
ಪೂರಕವಾಗಿ ಉಡುಪಿಯ ಹೃದಯ ಭಾಗದಲ್ಲಿರುವ ಆಡಳಿತ  ಕಚೇರಿಯನ್ನು ವಿಸ್ತರಿಸುವ ಮೂಲಕ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ವೇಗ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!