ರೋಟರಿ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ-22
ಉಡುಪಿ ಕಲಾವಿದರಿಗೆ ಕಲಾರಾಧಕರ ಮೆಚ್ಚುಗೆಯೇ ಪ್ರಶಸ್ತಿ ಸಂತಸದ ಕರತಾಡನವೇ ಪುರಸ್ಕಾರ.ಹಾಗಾಗಿ ಕಲಾವಿದರ ಕಲಾ ಪ್ರೌಢಿಮೆಯನ್ನು ಗುರುತಿಸಿ ಗೌರವಿಸೋಣ ಎಂದು ರೋಟರಿ ಜಿಲ್ಲಾ ಸಾಂಸ್ಕೃತಿಕ ಸಂಯೋಜಕ ಶುಭಾಶ್ಚಂದ್ರ ಕೊಡ್ಲಾಡಿ ಹೇಳಿದರು. ರೋಟರಿ ಉಡುಪಿ ರಾಯಲ್‌ನ ಆತಿಥ್ಯದಲ್ಲಿ
ಆಯೋಜಿಸಿದ್ದ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ -22 ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಮಿತ್ರರ ಕಲಾ ಪ್ರತಿಭೆಗೆ ವೇದಿಕೆ ಒದಗಿಸುವ ಈ ಒಂದು ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದ ರೋಟರಿ ಉಡುಪಿ ರಾಯಲ್‌ಗೆ ಅಭಿನಂದನೆ ಸಲ್ಲಿಸಿದರು.
ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸಮೃದ್ಧಿ ಕುಂದಾಪುರ
ತಮಟೆಯನ್ನು ಬಡಿಯುವುದರ ಮೂಲಕ ಸಾಂಸ್ಕೃತಿಕ
ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಕರ್ಣಾರ್ಜುನ ಕಾಳಗದ
ಒಂದು ತುಣಕನ್ನು ಪ್ರದರ್ಶಿಸಿದರು. ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ಸೇನಾನಿಗಳಾದ ದಯಾನಂದ ನಾಯಕ್, ರಾಜೇಶ್ ಪಾಲನ್, ಗೀತಾಶ್ರೀ ಎಂ ಉಪಾಧ್ಯ ಉಪಸ್ಥಿತರಿದ್ದರು.
ರೋಟರಿ ಉಡುಪಿ ರಾಯಲ್ ನ ಅಧ್ಯಕ್ಷರಾದ ಬಾಲಕೃಷ್ಣ ಎಸ್ ಮೂಡೋಡಿ ಅಧ್ಯಕ್ಷತೆ ವಹಿಸಿದ್ದರು. ವಲಯ ಸಾಂಸ್ಕೃತಿಕ ಸಂಯೋಜಕಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು. ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.