ಕರಾವಳಿ
ಶಿರ್ವ: ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾಪು: ತಾಲೂಕಿನ ಶಿರ್ವ ಗ್ರಾಮದ ಇರ್ಮಿಜ್ ಚರ್ಚ್ ಬಳಿಯ ಅವಿವಾಹಿತ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಸುಳ್ಯ ಸಂಪಾಜೆ ನಿವಾಸಿ ಲಿಯೋ ಕ್ರಿಸ್ಟೋಫರ್ ಡಿಸೋಜಾ(33)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ.
ಲಿಯೋ ತಾನು ಇದ್ದ ಬಾಡಿಗೆ ಮನೆಯ ಬಳಿ ಶುಕ್ರವಾರ ರಾತ್ರಿ ಮರವೊಂದಕ್ಕೆ ಕೇಬಲ್ ವಯರ್ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಶಿರ್ವಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.