ಉಡುಪಿ ಟೂರಿಸಂ ಕನೆಕ್ಟ್ – 2022″ ಕಾರ್ಯಾಗಾರ – ಉದ್ಘಾಟನೆ
ಉಡುಪಿ : ಕರಾವಳಿ ಪ್ರವಾಸೋದ್ಯಮ ಸಂಘಟನೆ (ACT) ಇವರು ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಜೊತೆಗೂಡಿ ನವೆಂಬರ್ 7 ರಿಂದ 9ರ ವರೆಗೆ ಆಯೋಜಿಸಿದ 3 ದಿನಗಳ “ಉಡುಪಿ ಟೂರಿಸಂ ಕನೆಕ್ಟ್ – 2022” ಎಂಬ ವೈಶಿಷ್ಟ ಪೂರ್ಣ ಕಾರ್ಯಾಗಾರದಲ್ಲಿ ಉಡುಪಿಯ ಹೋಟೆಲ್ ಕಿದಿಯೂರು ಇಲ್ಲಿನ ಶೇಷಶಯನ ಸಭಾಂಗಣದಲ್ಲಿ ಇಂದು ದಿನಾಂಕ 08-11-2022 ರಂದು ಹಮ್ಮಿಕೊಂಡ “ಉಡುಪಿಯ ಪ್ರವಾಸೋದ್ಯಮದ ಕಾರ್ಯಾಗಾರ – 2022” ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಉದ್ಘಾಟಿಸಿದರು.
ರಜತಮಹೋತ್ಸವದ ಸಂಭ್ರಮದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಉಡುಪಿಯ ಕುರಿತು ಹಲವು ಕಾರ್ಯಕ್ರಮಗಳನ್ನ ಸಂಯೋಜಿಸಲಾಗಿರುವಂತೆ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಬೆಂಗಳೂರು ಕಚೇರಿ ಈ ಕಾರ್ಯಾಗಾರದ (ಶೃಂಗ ಸಭೆಯ) ಪ್ರಾಯೋಜಕರಾಗಿದ್ದು, 3 ದಿನಗಳ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಸುಮಾರು 50 ಮಂದಿ ಟ್ರಾವೆಲ್ ಏಜೆಂಟ್, ಸೋಶಿಯಲ್ ಮೀಡಿಯಾ ಪ್ರಭಾವಿಗಳು, ಇವೆಂಟ್ ನಿರ್ವಾಹಕರು ಭಾಗವಹಿಸುತ್ತಿದ್ದಾರೆ.
ಕಾರ್ಯಾಗಾರದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕರು (ದಕ್ಷಿಣ ಪ್ರಾಂತ್ಯ) ಮೊಹಮ್ಮದ್ ಫಾರೂಕ್, ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಬಿ, ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯ ಜನರಲ್ ಮ್ಯಾನೇಜರ್ ರಾಮ ನಾಯ್ಕ್, ಕರಾವಳಿ ಪ್ರವಾಸೋದ್ಯಮ ಸಂಘಟನೆ (ACT) (ರಿ.) ಅಧ್ಯಕ್ಷರಾದ ಮನೋಹರ್ ಶೆಟ್ಟಿ, ಉಪಾಧ್ಯಕ್ಷರಾದ ನಾಗರಾಜ ಹೆಬ್ಬಾರ್, ಕಾರ್ಯದರ್ಶಿಗಳಾದ ಗೌರವ್ ಶನವ, ಕೋಶಾಧಿಕಾರಿಗಳಾದ ಚಂದ್ರಕಾಂತ್ ಡಿಉಪಸ್ಥಿತರಿದ್ದರು.