ಟ್ವೆಂಟಿ -20 ವಿಶ್ವಕಪ್ ಪಾಕಿಸ್ತಾನ ಫೈನಲ್ ಗೆ ಎಂಟ್ರಿ
ಸಿಡ್ನಿ: ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಕೂಟದಲ್ಲಿ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗಳಿಂದ ಜಯಗಳಿಸಿದ ಪಾಕಿಸ್ತಾನ ಫೈನಲ್ ಗೆ ಎಂಟ್ರಿ ಪಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ
ನ್ಯೂಜಿಲಂಡ್ ತನ್ನ ಕೋಟಾದ 20 ಒವರ್ ಗಳಲ್ಲಿ 4ವಿಕೆಟ್ ಗಳನ್ನು ಕಳೆದುಕೊಂದು ಸ್ಪರ್ಧಾತ್ಮಕ 152 ರನ್ ಗಳನ್ನು ಗಳಿಸಿತ್ತು. ಮಧ್ಯಮ ಕ್ರಮಾಂಕದ ಡೆರಿಲ್ ಮಿಶೆಲ್ ಅಂತಿಕ ಒವರ್ ಗಳಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿ 35 ಎಸೆತಗಳಿಂದ 53 ರನ್ ಗಳಿಸಿದ್ದರು. ಕಪ್ತಾನ ವಿಲಿಯಂಸನ್ 46 ರನ್ ಗಳಿಸಿದ್ದರು
ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು
ನ್ಯೂಜಿಲೆಂಡ್ ತಂಡ 152 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಮಿಷೆಲ್ 53 ರನ್, ವಿಲಿಯಮ್ಸ್ 46 ರನ್ ಗಳಿಸಿ
ಮಿಂಚಿದರು. ಗುರಿ ಬೆನ್ನಟ್ಟಿದ ಪಾಕಿಸ್ತಾನ 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿದೆ. ಪಾಕ್ ಪರ ಆರಂಭಿಕರಾದ ರಿಜ್ವಾನ್ ಮತ್ತು ಬಾಬರ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು. ಅಂತಿಮವಾಗಿ ಕೇವಲ3 ವಿಕೆಟ್
ಕಳೆದುಕೊಂಡು ಪಾಕ್ ಗೆಲುವಿನ ನಗೆ ಬೀರಿ, ಚುಟುಕು ಕ್ರಿಕೆಟ್ ವಿಶ್ವಕದನದಲ್ಲಿ ಮೂರನೇ ಬಾರಿಗೆ ಫೈನಲ್ ಗೆ ಪ್ರವೇಶ ಮಾಡಿದೆ.
ಇಂಗ್ಲೆಂಡ್ ಮತ್ತು ಭಾರತದ ನಡುವೆ 2ನೇ ಸೆಮಿಫೈನಲ್
ಪಂದ್ಯ ನಾಳೆ ನಡೆಯಲಿದ್ದು, ಗೆದ್ದವರು ಫೈನಲಿನಲ್ಲಿ ಪಾಕ್ ಜೊತೆ ಟ್ರೋಫಿಗೆ ಕಾದಾಡಲಿದ್ದಾರೆ.