ಕರಾವಳಿ

ಶೂಟಿಂಗ್ ವೇಳೆ ಅವಘಡ : ಕುಸಲ್ದರಸೆ ಖ್ಯಾತಿಯ ನವೀನ್‌ ಡಿ ಪಡೀಲ್‌ ಆಸ್ಪತ್ರೆಗೆ ದಾಖಲು

ಮಂಗಳೂರು: ಕುಸಾಲ್ಡರಸೆ ಖ್ಯಾತಿಯ ಚಿತ್ರನಟ ನವೀನ್ ಡಿ ಪಡೀಲ್ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರಿಗೆ ಮೂರು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಂಗಭೂಮಿ ಹಾಗೂ ತುಳು ಸಿನಿಮಾಗಳಲ್ಲಿ ನಟ ನವೀನ್ ಡಿ ಪಡೀಲ್ ಹೆಸರು ಚಿರಪರಿಚಿತ. ಇವರಿಗೆ ತುಳು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರು ಅಭಿಮಾನಿ ಬಳಗವಿದೆ. ಕೆಲ ವರ್ಷಗಳ ಹಿಂದೆ ನವೀನ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹಲವಾರು ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ನವೀನ್ ಪಡೀಲ್ ಅವರು ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ತಮ್ಮ ಜನರನ್ನು ನಗಿಸುವ ಕೆಲಸ ಮಾಡಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!