ರಾಷ್ಟ್ರೀಯ

ಸದ್ಯದಲ್ಲೇ ಬರಲಿದೆ ನಾಲ್ಕು ವರ್ಷದ ಪದವಿ ಕೋರ್ಸ್

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ
(ಯುಜಿಸಿ) ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ಬರಲಿರುವ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲದೇ, ಮುಂದಿನ ಶೈಕ್ಷಣಿಕ ವರ್ಷದಿಂದ ಬಹುತೇಕ ರಾಜ್ಯ ಮತ್ತು ಖಾಸಗಿ
ವಿಶ್ವವಿದ್ಯಾಲಯಗಳಲ್ಲಿ ಎಷ್ಟೆಯುಜಿಪಿಯ ಜಾರಿಗೆ ಬರುವ
ಎಲ್ಲಾ ಸಾಧ್ಯತೆಗಳಿವೆ. ಡೀಮ್ಸ್ ವಿಶ್ವವಿದ್ಯಾಲಯಗಳುಲ್ಲಿ
ಅನುಷ್ಠಾನಗೊಳಿಸಲು ಒಪ್ಪಿಗೆ ಸಿಗಲಿದೆ.

ಯುಜಿಸಿಯ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಪದವಿ ಕೋರ್ಸ್ ಒದಗಿಸಲಾಗುವುದು. ವಿದ್ಯಾರ್ಥಿಗಳು ಈ ಕೋರ್ಸುಗಳನ್ನು ಆಯ್ಕೆ ಮಾಡಲು ಒತ್ತಾಯವಿಲ್ಲ. ಓರ್ವ ವಿದ್ಯಾರ್ಥಿ ಬಯಸಿದರೆ ಮೂರು ವರ್ಷಗಳ ಪದವಿ ಕೋರ್ಸ್ ಮುಂದುವರಿಸಬಹುದು.

ಮೊದಲ ಅಥವಾ ಎರಡನೇ ವರ್ಷದಲ್ಲಿ ವ್ಯಾಸಂಗ
ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಅವರಿಗೆ ಆಸಕ್ತಿ ಇದ್ದರೆ ಅವರಿಗೆ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್ ಆಯ್ಕೆ ಮಾಡುವ ಅವಕಾಶಗಳಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!