ಕರಾವಳಿ

ಕುಂದಾಪುರ : M.ಕೋಡಿ ಬೀಚ್‌ನಲ್ಲಿ ಮುಳುಗಿ ಓರ್ವನ ಸಾವು, ಇನ್ನೊಬ್ಬನ ರಕ್ಷಣೆ

ಕುಂದಾಪುರ, ನ.23: ಕುಂದಾಪುರದ ಎಂಕೋಡಿ ಎಂಬಲ್ಲಿ ಸಮುದ್ರದಲ್ಲಿ ಈಜುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ 1:30ರ ಸುಮಾರಿಗೆ ನಡೆದಿದ್ದು, ಮೃತರನ್ನು ನಳಗುಂದ ತಾಲೂಕಿನ ಮಂಜು (ವ38) ಎಂದು ಗುರುತಿಸಲಾಗಿದೆ. ಪತ್ನಿ ಜೊತೆ ಮಂಜು ಬೀಚ್‌ಗೆ ತೆರಳಿದ್ದು, ಈ ವೇಳೆ ಮಂಜು ಹಾಗೂ ಇನ್ನೋರ್ವ ವ್ಯಕ್ತಿ ಸಮುದ್ರಕ್ಕೆ ಈಜಲು ಆರಂಭಿಸಿದ್ದರು, ಅಲೆಗಳ ಅಬ್ಬರಕ್ಕೆ ಸಿಲುಕಿದ ಮಂಜು ನೀರಿನಲ್ಲಿ ಮುಳುಗುತ್ತಿದ್ದಾಗ ಜೊತೆಗಿದ್ದ ವ್ಯಕ್ತಿ ಮಂಜುವಿನ ರಕ್ಷಣೆಗೆ ಯತ್ನಿಸಿದ್ದು, ಆತ ಕೂಡ ಅಳೆಗಳ ಅಬ್ಬರಕ್ಕೆ ಮುಳುಗಿದ ಎನ್ನಲಾಗಿದೆ.

ಕೂಡಲೇ ಸ್ಥಳೀಯರಾದ ಹಸೈನಾರ್, ಝೈನ್, ನಾಗರಾಜ್ ಕೋಡಿ, ವೆಂಕಟೇಶ್ ಕೋಡಿ, ಸಲಾಂ ಎಂಬವರು ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತಂದರು ಕೂಡ ಮಂಜು ಕೊನೆಯುಸಿರೆಳೆದಿದ್ದರು. ಮೃತ ದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

M.ಕೋಡಿ ಬೀಚ್‌ನಲ್ಲಿ ಹಲವು ಮಂದಿ ಈಗಾಗಲೇ ಈಜಲು ಹೋಗಿ ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಆದರೆ ಇಲ್ಲಿ ಸುರಕ್ಷತೆಗೆ ಸಂಬಂಧಿಸಿ ಯಾವುದೇ ರೀತಿಯ ಸರಿಯಾದ ವ್ಯವಸ್ಥೆಗಳಿಲ್ಲ. ಸರಕಾರ ಇದರತ್ತ ಗಮನ ಹರಿಸಬೇಕು ಎಂದು ಸ್ಥಳೀಯ ನಾಗರಿಕರುಒತ್ತಾಯಿಸಿದ್ದಾರೆ.

www.udupi.news

Related Articles

Leave a Reply

Your email address will not be published. Required fields are marked *

Back to top button
error: Content is protected !!