ಕರಾವಳಿ

ನ.26 ಬೃಹತ್ ಉದ್ಯೋಗ ಮೇಳ

ಸುಳ್ಯ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರ ಸಹಭಾಗಿತ್ವದಲ್ಲಿ ಕೆರಿಯರ್ ಡಿಸ್ಟಿನಿ ಹಾಗೂ ಕೆ.ಎಸ್.ಡಿ.ಸಿ ಸಹಕಾರದೊಂದಿಗೆ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸುಳ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಬೃಹತ್ ಉದ್ಯೋಗ ಮೇಳ 2022 ನವೆಂಬರ್ 26 ಶನಿವಾರ ನೆಹರೂ ಮೆಮೋರಿಯಲ್ ಕಾಲೇಜು ಕುರುಂಜಿಭಾಗ್ ಸುಳ್ಯ ಇಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ನಡೆಯಲಿದೆ.

ಯಾರು ಭಾಗವಹಿಸಬಹುದು ?

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉದ್ಯೋಗ ಅರಸಿ ಬರುವ
ಉದ್ಯೋಗಾಂಕ್ಷಿಗಳಿಗೆ ಅವಕಾಶವಿದ್ದು ಈ ಉದ್ಯೋಗ
ಮೇಳದಲ್ಲಿ ಯಾವುದೇ ನೊಂದಣಿ ಶುಲ್ಕವಿಲ್ಲ.

60 ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ
ಭಾಗವಹಿಸುವ ನಿರೀಕ್ಷೆ ಇದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಯಾವುದೇ ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಅಧ್ಯಯನ ಮಾಡಿದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು ವಯಸ್ಸಿನ ಮಿತಿ ಇರುವುದಿಲ್ಲ. ಒಂದು ವಿದ್ಯಾರ್ಥಿಗೆ ಅನೇಕ ಕಂಪನಿಗಳಿಗೆ ಭಾಗವಹಿಸುವ ಅವಕಾಶವಿದೆ. ಬಯೋಡಾಟಾದ ಹತ್ತು ಪ್ರತಿಗಳನ್ನು ಹೊಂದಿರಬೇಕು.
ನೊಂದಣಿ ಮಾಡಲು ಸಂಪರ್ಕಿಸಿ-7338676611,
9844783022

Related Articles

Leave a Reply

Your email address will not be published. Required fields are marked *

Back to top button
error: Content is protected !!