ಕರಾವಳಿ

ಹಿರಿಯಡ್ಕ: ಚಿನ್ನದ ಸರ ಕಳವು ಮಾಡಿದ ಹೋಮ್ ನರ್ಸ್ ಬಂಧನ

ಉಡುಪಿ : ನಗರದ ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ಹೋಂ ನರ್ಸ್ ಕೆಲಸಕ್ಕೆ ಸೇರಿದ ಮಹಿಳೆಯೊಬ್ಬಳು ಆ ಮನೆಯ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ‌ ಕದ್ದು ಪರಾರಿಯಾಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಯುವತಿ ಬಾಗಲಕೋಟೆ ನಿವಾಸಿ ರೇಖಾ ಎಂದು ತಿಳಿದು ಬಂದಿದೆ.

ಘಟನೆ ವಿವರ : ಉಡುಪಿ ನಗರದ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ಹೋಂ ನರ್ಸ್ ಕೆಲಸಕ್ಕೆ ರೇಖಾ ಹೆಬ್ಬಾಳ್ಳಿ ಎಂಬವಳನ್ನು ಚೆನ್ನಿಬೆಟ್ಟು, ಮದಗದ ವಾಸಿ ವಯೋ ವೃದ್ದೇ ಸರಸ್ವತಿ(98) ರವರ ಆರೈಕೆಯನ್ನು ನೋಡಿಕೊಳ್ಳಲು ಹೋಂ ನರ್ಸ್ ಆಗಿ ನೇಮಿಸಿದ್ದು, ಕೆಲವು ದಿನಗಳ ವರೆಗೆ ಕೆಲಸ ನಡೆಸಿ ಆಕೆ ದಿನಾಂಕ:21/11/2022 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಸರಸ್ವತಿರವರ ಕುತ್ತಿಗೆಯಲ್ಲಿದ್ದ ಸುಮಾರು ಒಂದು ಲಕ್ಷ ನಾಲವತ್ತೈದು ಸಾವಿರ ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸಂಶಯದ ಮೇಲೆ ಸರಸ್ವತಿ ರವರ ಮಗ ವಸಂತ ಶೆಟ್ಟಿ ರವರು ದಿನಾಂಕ:24/11/2022 ರಂದು ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದೇ ದಿನ ಉಡುಪಿಯಲ್ಲಿ ರೇಖಾ ಹೆಬ್ಬಳ್ಳಿ ಬಾಗಲಕೋಟೆ ಎಂಬವಳನ್ನು ವಶಕ್ಕೆ ಪಡೆದು ಕಳವು ಮಾಲನ್ನು ಸ್ವಾಧೀನ ಪಡಿಸಿಕೊಂಡು ಆರೋಪಿತಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿರುತ್ತದೆ. ಅಲ್ಲದೆ ಹೋಂ ನರ್ಸಿಂಗ್ ಏಜೆನ್ಸಿಗಳು ಕೆಲಸಕ್ಕೆ ನೇಮಿಸುವರ ಬಗ್ಗೆ ಯಾವುದೇ ಪೂರ್ವಪರ ಮಾಹಿತಿಯನ್ನು ಪಡೆಯದೇ ನಿರ್ಲಕ್ಷ್ಯತನದಿಂದ ನೇಮಿಸುವುರಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿರುತ್ತಾರೆ.

ಶ್ರೀ ಹಾಕೆ ಅಕ್ಷಯ ಎಂ ಐಪಿಎಸ್‌ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಶ್ರೀ ಸಿದ್ದಲಿಂಗಪ್ಪ ಕೆ.ಎಸ್.ಪಿಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್‌ಐ ಶ್ರೀ ಅನಿಲ್ ಬಿ ಎಮ್, ಸಿಬ್ಬಂದಿಗಳಾದ ಎಎಸ್‌ಐ,ಜಯಂತ, ಸುಂದರ್,ಎಚ್.ಸಿ. ದಯಾನಂದ ಪ್ರಭು, ರಘು, ರಾಘವೇಂದ್ರ, ಕಾಮತ್, ಪಿ.ಸಿ.ಆದರ್ಶ, ಭೀಮಪ್ಪ,ನಿತಿನ್,ನಬಿ,ಕಾತಿ‌೯ಕ ರಾಜೇಶ್ವರಿ, ಸುರೇಖಾ, ಜ್ಯೋತಿ ನಾಗರತ್ನಾ, ಸುಮಲತಾ, ಜಯಲಕ್ಷ್ಮೀರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!