ಕರಾವಳಿ
ಆಟೋ ರಿಕ್ಷಾಕ್ಕೆ ಎಟಿಎಂಗೆ ಹಣಸಾಗಿಸುವ ವಾಹನ ಡಿಕ್ಕಿ – ಆಟೋ ಚಾಲಕ ಸ್ಥಳದಲ್ಲೇ ಸಾವು

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಆಟೋ ರಿಕ್ಷಾ ಒಂದಕ್ಕೆ ಎಟಿಎಂ ಗೆ ಹಣಸಾಗಿಸುವ ವಾಹನ ಡಿಕ್ಕಿಯಾದ ಪರಿಣಾಮ ಆಟೋಚಾಲಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನ.29ರ ಸಂಜೆ ನಡೆದಿದೆ.
34 ನೆಕ್ಕಿಲಾಡಿ ಗ್ರಾಮದ ಸುಭಾಶ್ ನಗರ ನಿವಾಸಿ ವಾಸು ಪೂಜಾರಿ ಮೃತ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಇವರು ಉಪ್ಪಿನಂಗಡಿ ಕಡೆಗೆ ಆಟೊರಿಕ್ಷಾದಲ್ಲಿ ಬರುತ್ತಿದ್ದ ಸಂದರ್ಭ ಉಪ್ಪಿನಂಗಡಿಯಿಂದ ಬಿ.ಸಿ.ರೋಡು ಕಡೆಗೆ ಹೋಗುತ್ತಿದ್ದ ಎಟಿಎಂ ಹಣ ಸಾಗಾಟದ ವಾಹನ ಇವರ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.