ರಾಷ್ಟ್ರೀಯ
ಡಿಜೆ ಮ್ಯೂಸಿಕ್ ಶಬ್ದದಿಂದ 63 ಕೋಳಿಗಳ ಸಾವು

ಒಡಿಶಾ: ಡಿಜೆ ಮ್ಯೂಸಿಕ್ ಶಬ್ದದಿಂದ ಹೃದಯಾಘಾತವಾಗಿ 63 ಕೋಳಿಗಳು ಸಾವನ್ನಪ್ಪಿವೆ ಎಂದು ಕೋಳಿ ಫಾರಂ ಮಾಲೀಕನೊಬ್ಬ ನೆರೆಯನೆಯವರ ವಿರುದ್ಧ ದೂರು ನೀಡಿದ ಘಟನೆ ನಡೆದಿದೆ.
ಒಡಿಶಾದ ಬಾಲಸೋರ್ ಎನ್ನುವಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಫಾರಂ ಮಾಲಿಕ ರಂಜಿತ್ ಪರಿದಾ ಎನ್ನುವ ವ್ಯಕ್ತಿ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಹಾಕಿದ್ದ ಡಿಜೆ ಮ್ಯೂಸಿಕ್ ನಿಂದ ಕೋಳಿಗಳು ಹೃದಯಾಘಾತಗೊಂಡು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾನೆ.
ಅಲ್ಲದೆ ಪಶುವೈದ್ಯರನ್ನು ಸಂಪರ್ಕಿಸಿದಾಗ ಅವುಗಳು ಅತಿಯಾದ ಶಬ್ದದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿವೆ ಎಂದಿದ್ದಾರೆ ಎಂದು ಮಾಲೀಕ ತಿಳಿಸಿದ್ದಾನೆ.
ಇದೀಗ ಸೂಕ್ತ ಪರಿಹಾರ ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ ಕೋಳಿ ಫಾರಂ ಮಾಲೀಕ ರಂಜಿತ್.