ಕರಾವಳಿ

ಕೆಎಂಸಿ ಮಣಿಪಾಲಕ್ಕೆ ‘ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ’

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಎಕನಾಮಿಕ್ ಟೈಮ್ಸ್ ಅವರಿಂದ ಮೂಳೆ ಮತ್ತು ಕೀಲಿನ ವಿಭಾಗ (ದಕ್ಷಿಣ) 2022 ವಿಭಾಗದಲ್ಲಿ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಲಭಿಸಿದೆ.

ಎಕನಾಮಿಕ್ ಟೈಮ್ಸ್ 2 ನೇ ಆವೃತ್ತಿಯ ‘ಆರೋಗ್ಯ ಕ್ಷೇತ್ರದ
ಪ್ರಶಸ್ತಿಯಲ್ಲಿ’ ವಿಶೇಷತೆ ಗುರುತಿಸುವುದು, ಅಂಗೀಕರಿಸುವುದು ಮತ್ತು ಆರೋಗ್ಯ ಕ್ಷೇತ್ರದ ಪ್ರತಿಯೊಂದು ವಿಭಾಗದಲ್ಲಿ ಅದ್ಭುತ ಕೊಡುಗೆ ನೀಡಿರುವ ಸಂಸ್ಥೆ ಹಾಗೂ ಸಾಧಕರ ಸಾಧನೆಯನ್ನು ದೃಢೀಕರಿಸುವುದು ಆಗಿದೆ.

ಎಕನಾಮಿಕ್ ಟೈಮ್ಸ್ ನ ಈ ಪ್ರಶಸ್ತಿಯ ಮಾನದಂಡವೂ,
ರೋಗನಿರ್ಣಯ ಮತ್ತು ಪರೀಕ್ಷೆಗಳಲ್ಲಿ ಗಮನಾರ್ಹವಾದ
ಬದಲಾವಣೆಗಳನ್ನು ಒದಗಿಸುವುದರಿಂದ ಹಿಡಿದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ, ಪ್ರತಿ ಸೌಲಭ್ಯವನ್ನು ಅದರ ಮೂಲಸೌಕರ್ಯ ಹಾಗೂ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸುವವರ ಪ್ರತಿಯೊಬ್ಬರ ಕೊಡುಗೆ ಮತ್ತು
ಅವರ ಪ್ರಯತ್ನಗಳಿಗಾಗಿ ಗುರುತಿಸಲ್ಪಡುತ್ತಾರೆ.

ಮಣಿಪಾಲದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್, ಬಲ್ಲಾಳ್ ಅವರು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಾಹೆಯ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್‌ ಮತ್ತು ಮೂಳೆ ಮತ್ತು ಕೀಲಿನ ವಿಭಾಗದ ಮುಖ್ಯಸ್ಥ ಡಾ. ಶ್ಯಾಮಸುಂದರ್ ಭಟ್ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಮಾಹೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ಸಿ ಜಿ ಮುತ್ತಣ್ಣ, ಕೆಎಂಸಿ ಮಣಿಪಾಲ ಡೀನ್ ಡಾ. ಶರತ್ ಕಿ ರಾವ್, ಆರ್ಥೋಪೆಡಿಕ್ಸ್ ವಿಭಾಗದ ಎಲ್ಲಾ ಘಟಕದ ಮುಖ್ಯಸ್ಥರು ಮತ್ತು ಆಸ್ಪತ್ರೆಯ ಇತರ ನಿರ್ವಹಣಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ,
ಮಣಿಪಾಲದ ಕಸ್ತುರ್ಬಾ ಆಸ್ಪತ್ರೆಯು ಉತ್ತಮ ಪ್ರತಿಭೆಯನ್ನು ಗುರುತಿಸಿ ಅವರನ್ನು ಬೆಳೆಸುವ ಮೂಲಕ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಲು ಸದಾ ಪ್ರಯತ್ನಿಸುತ್ತದೆ.

1990 ರಿಂದ ಭಾರತದಾದ್ಯಂತ ಬಹಳ ಪ್ರಸಿದ್ಧವಾದ ಮೂಳೆ ಮತ್ತು ಕೀಲಿನ ವಿಭಾಗ ಇದಕ್ಕೆ ಉದಾಹರಣೆಯಾಗಿದೆ. ವಿಭಾಗವು ಉಪ-ವಿಶೇಷತೆಯನ್ನು ರಚಿಸಿಕೊಂಡಿದೆ ಮತ್ತು ಪ್ರತಿ ಘಟಕವು ಬೆನ್ನುಮೂಳೆ, ಭುಜ, ಮೊಣಕಾಲು, ಕೈ, ಮಕ್ಕಳ ಮೂಳೆ ಮತ್ತು ಕೀಲಿನ, ಕ್ರೀಡಾ ಗಾಯ, ಕಾಲು ಮತ್ತು ಪಾದದ ಚಿಕಿತ್ಸೆಯಲ್ಲಿ ಪರಿಣತಿಯನ್ನು ಹೊಂದಿದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮತ್ತು ಮೂಳೆ ಚಿಕಿತ್ಸಾ
ವಿಭಾಗವು ಎಕನಾಮಿಕ್ ಟೈಮ್ಸ್‌ನಿಂದ ಇಂತಹ ಪ್ರತಿಷ್ಠಿತ
ಪ್ರಶಸ್ತಿಯನ್ನು ಪಡೆದಿರುವುದು ಒಂದು ಅತ್ಯುತ್ತಮ
ಸಾಧನೆಯಾಗಿದೆ ಎಂದು ಡೀನ್ ಮತ್ತು ಮೂಳೆ ಶಸ್ತ್ರ ಚಿಕಿತ್ಸಕ ಡಾ. ಶರತ್ ಕೆ ರಾವ್ ಹೇಳಿದರು.

ಇದರಿಂದ ನಾವು ಹೆಚ್ಚು ಜವಾಬ್ದಾರರಾಗಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಲು ಹುರಿದುಂಬಿಸುತ್ತದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!