ಕರಾವಳಿ

ಮಣಿಪಾಲ : ವಾಹನಅಪಘಾತ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರು

ಪರ್ಕಳ : ಇಲ್ಲಿನ ಕೆಳಪರ್ಕದಲ್ಲಿರುವ ನಗರಸಭೆಯ ನೀರಿನ ರೇಚಕದ ಎದುರು ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುತ್ತಿರುವ ಭತ್ತದ ಮೂಟೆ ಹೊತ್ತ ಲಾರಿ ವೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರಿನ ಮೇಲೆಯೇ ಎರಗಿ ಒಂದು ಕಾರ್ ಅಂತು ಸಂಪೂರ್ಣ ಜಖಂ ಗೊಂಡಿದೆ. ಬತ್ತದ ಮೂಟೆ ಲಾರಿಯಿಂದ ಬೇರ್ಪಟ್ಟು ರಸ್ತೆ ಯೆಲ್ಲ ಚೆಲ್ಲಾಡಿದೆ. ಈ ವಾಹನ ಅಪಘಾತವು ಮಧ್ಯರಾತ್ರಿ ನಡೆದಿದೆ. ವಾಹನದಲ್ಲಿರುವರು ಅಪಾಯದಿಂದ ಪಾರಾಗಿದ್ದಾರೆ ಒಂದು ಟೂರಿಸ್ಟ್ ಕಾರು ಉಡುಪಿಯ ನಿಲ್ದಾಣಕ್ಕೆ ಸೇರಿದೆ ಮತ್ತೊಂದು ಸಂತೆಕಟ್ಟೆಯ ನಿಲ್ದಾಣಕ್ಕೆ ಸೇರಿದೆ ಪ್ರಥಮ ಮಾಹಿತಿ ಯಿಂದ ತಿಳಿದು ಬಂದಿದೆ.

ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಬೇರೆ ಜಿಲ್ಲೆಯ,ಹಾಗೂ ಅನ್ಯ ರಾಜ್ಯದ ವಾಹನ ಚಾಲಕರಿಗೆ ಇಲ್ಲಿ ಗೊಂದಲ ಉಂಟಾಗುತ್ತದೆ. ಹೊಸ ರಸ್ತೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಳೆದ 15 ದಿನಗಳಿಂದ ಸಂಚರಿಸಲು ಅವಕಾಶ ಮಾಡಿ ಕೊಟ್ಟಿರುತ್ತಾರೆ. ನಿನ್ನೆ ಸ್ಥಳೀಯರು ವಾಹನ ಚಲಾವಣೆಯಿಂದ ಧೂಳಾಗುತ್ತದೆ ಎಂದುಮಣೆಪಾಲ ಠಾಣೆಗೆ ದೂರು ಸಹ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ ಮತ್ತು ರಕ್ಷಣಾ ಬ್ಯಾರಿಕೇಡ್ ಳನ್ನು ತೆಗೆಯಲಾಗಿದೆ.

ಸೂಕ್ತ ಬೆಳಕಿನ ವ್ಯವಸ್ಥೆಯು ಇಲ್ಲ ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂದು ಗೊಂದಲ ಉಂಟುಮಾಡುತ್ತದೆ. ಈ ರೀತಿ ಹಿಂದೆಯೂ ಈ ಭಾಗದಲ್ಲಿ ವಾಹನ ಅಪಘಾತ ಘಟನೆ ನಡೆದಿದೆ ಹೊಸ ರಸ್ತೆಯ ಕಾಮಗಾರಿಯೇ ನಡೆಸುತ್ತಿರುವಾಗಲೇ ವಾಹನ ಸಂಚಾರ ಮಾಡಿ ಕೊಟ್ಟಿರುವುದೇ ಇಲ್ಲಿ ಸಮಸ್ಯೆ ಕಂಡು ಬಂದಿದೆ. ಮತ್ತು ವಾಹನ ಸಂಚಾರ ಮಾಡಿ ಪರಿಸರವೆಲ್ಲ ಧೂಳಿನಿಂದ ಕೂಡಿದೆ. ಹಾಗಾಗಿ ಸ್ಥಳೀಯರು ನಿನ್ನೆ ಮಣೆಪಾಲಠಾಣೆಯ ಮೆಟ್ಟಿಲೇರಿದ್ದಾರೆ.. ಹೀಗಿದ್ದರೂ ಹಳೆಯ ರಸ್ತೆಯಲ್ಲಿ ಸಂಚರಿಸುವಂತೆ ಯಾವುದೇ ಸುರಕ್ಷತಾ ಬೋರ್ಡ್ ಗಳಿಲ್ಲ. ವಾಹನ ಚಾಲಕರು ಗೊಂದಲಕ್ಕೀಡಾಗಿದ್ದಾರೆ. ಜಖಂ ಗೊಂಡ ಒಂದು ಕಾರನ್ನು ರಾತ್ರಿ ಹೊತ್ತಿನಲ್ಲಿ ತೆಗೆದಿದ್ದಾರೆ. ಉಳಿದೆರಡು ಹಾಗೆಯೇ ಇದೆ. ಕೆಳಪರ್ಕದ ಹಳೆ ರಸ್ತೆಗೆ ಸಂಪರ್ಕಿಸುವ ಎರಡು ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹೀಗಾಗಿ ಇಲ್ಲಿ ಹಳೆ ರಸ್ತೆ ಯಾವುದು ಹೊಸ ರಸ್ತೆ ಯಾವುದು ಗೊತ್ತಾಗುವುದಿಲ್ಲ. ಶಾಸಕರು 15 ದಿವಸದೊಳಗೆ ಕಾಂಕ್ರೀಟ್ ರಸ್ತೆ ಹಳೆ ರಸ್ತೆ ಸಂಪರ್ಕಿಸುವಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಭರವಸೆ ನೀಡು ಆರು ತಿಂಗಳು ಕಳೆದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!