ಸ್ಥಳೀಯ ರೌಡಿಗಳಿಗೆ ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಉದ್ಯಮಿ ತಂದೆ ಬರ್ಬರವಾಗಿ ಹತ್ಯೆ
ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಹೆತ್ತ ಮಗನನ್ನೇ ಉದ್ಯಮಿ ತಂದೆ ಬರ್ಬರವಾಗಿ ಹತ್ಯೆ ಮಾಡಿಸಿರುವ ಘಟನೆ ನಡೆದಿದೆ.
ಸ್ಥಳೀಯ ರೌಡಿಗಳಿಗೆ ಉದ್ಯಮಿ ಭರತ್ ಜೈನ್ ತನ್ನ ಮಗ ಅಖಿಲ್ ಜೈನ್ ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಅಖಿಲ್ ಮೃತದೇಹ ಕೇಶ್ವಾಪುರ ಬಳಿಯ ತೋಟದ ಮನೆಯಲ್ಲಿ ಪತ್ತೆಯಾಗಿತ್ತು.
ಪೊಲೀಸರು 48 ಗಂಟೆಯೊಳಗಾಗಿ ಪ್ರಕರಣ ಬೇಧಿಸಿದ್ದಾರೆ. ಮಗನ ಉಪಟಳ ತಾಳಲಾರದೇ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಗಿ ಭರತ್ ಜೈನ್ ವಿಚಾರಣೆ ವೇಳೆ ತಪ್ರೊಪ್ಪಿಕೊಂಡಿದ್ದಾನೆ. ಭರತ್ ಜೈನ್ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕೇಶ್ವಾಪುರ ಠಾಣೆಯಲ್ಲಿ ಭರತ್ ಜೈನ್ ಡಿಸೆಂಬರ್ 3ರಂದು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿ ಹೈಡ್ರಾಮಾ ಮಾಡಿದ್ದ. ಅನುಮಾನದ ಮೇರೆಗೆ ಪೊಲೀಸರು ಭರತ್ ಜೈನ್ ನನ್ನೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಸ್ಥಳೀಯ ಹಂತಕರಿಗೆ ಸುಪಾರಿಕೊಟ್ಟು ಮಗನನ್ನು ಕೊಲ್ಲಿಸಿದ್ದಾಗಿ ಬಾಯ್ದಿಟ್ಟಿದ್ದಾರೆ