ಕರಾವಳಿ

ಕಾಶ್ಮೀರದಿಂದ ಕನ್ಯಾಕುಮಾರಿಗೆ ರೋಲರ್ ಸ್ಕೇಟಿಂಗ್ : 20 ಜನರ ಯುವಪಡೆಯಿಂದ ಅತುಲ್ಯ ಭಾರತ್ ಸಂದೇಶ

ಕುಂದಾಪುರ: ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ‌, ಜನ್ಮಭೂಮಿಯೇ ತಾಯಿ, ಅದುವೇ ಸ್ವರ್ಗ ಎಂಬಂತೆ ಭಾರತ ನಮ್ಮ ಪವಿತ್ರ ಭೂಮಿ, ಅಲ್ಲಿ ಪ್ರತಿಯೊಬ್ಬರೂ ದೇಶಭಕ್ತಿ, ಧೈರ್ಯ, ಶೌರ್ಯ, ಆತ್ಮಸಾಕ್ಷಿಯ ಮತ್ತು ರಾಷ್ಟ್ರದ ಮೇಲಿನ ಆಳವಾದ ಪ್ರೀತಿಯ ಮನೋಭಾವದಿಂದ ತುಂಬಿದ್ದಾರೆ. ಜೊತೆಗೆ ಸ್ವಚ್ಛ ಭಾರತ ಸಂದೇಶ, ಶುದ್ದ ಪರಿಸರ, ಅತುಲ್ಯ ಭಾರತ ಸಂದೇಶಗಳು..
ಇದು ರಾಜೇಶ್ ಡೋಗ್ರಾ ರೋಲರ್ ಸ್ಕೇಟಿಂಗ್ ಸ್ಕೂಲ್ ಮತ್ತು ವಾರಣಾಸಿ ರೋಲರ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ​​ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 20 ಜನರ ತಂಡ ರೋಲರ್ ಸ್ಕೇಟಿಂಗ್ ಮೂಲಕ ಸಾಗಿ ಬಂದ ಮನಮೋಹಕ ದೃಶ್ಯವಿದು.

10 ಪುರುಷರು, 10 ಮಹಿಳೆಯರು ಇರುವ ಈ ತಂಡ “ನಾರಿ ಶಕ್ತಿ” ಯೊಂದಿಗೆ “ಏಕ್ ಭಾರತ್ ಶ್ರೇಷ್ಠ ಭಾರತ್ ಇನ್‌ಕ್ರೆಡಿಬಲ್ ಇಂಡಿಯಾ ರೋಲರ್ ಸ್ಕೇಟಿಂಗ್ ಪ್ರವಾಸವನ್ನು ಸೆಪ್ಟಂಬರ್ 27ರಿಂದ ಡಿಸೆಂಬರ್ 25ರವರೆಗೆ ನಡೆಸುತ್ತಿದೆ. ಕಾಶ್ಮೀರದಿಂದ ಸೆಪ್ಟೆಂಬರ್ 27 ರಿಂದ ಹೊರಟ ತಂಡವನ್ನು ನಾವು ಕುಂದಾಪುರ ತಾಲೂಕಿನ ನಾವುಂದದಲ್ಲಿ ಮಾತನಾಡಿಸಿದೆವು.

ಬೈಟ್ ಈ ಸಂದರ್ಭ ಮಾತನಾಡಿದ ತಂಡದ ಸದಸ್ಯರು, ಇದೊಂದು ಸಾಹಸಮಯ ಮತ್ತು ರೋಮಾಂಚಕ ಪ್ರಯಾಣವಾಗಿದೆ. ತಂಡವು 13 ರಾಜ್ಯಗಳು, 100 ನಗರಗಳು ಮತ್ತು 10000 ಗ್ರಾಮಗಳು ಮತ್ತು ಪಟ್ಟಣಗಳನ್ನು ಹಾದುಹೋಗುತ್ತದೆ, ಧಾರ್ಮಿಕ, ಐತಿಹಾಸಿಕ ಪರಂಪರೆ, ಪ್ರವಾಸಿ ಸ್ಥಳಗಳನ್ನು ಪ್ರಚಾರ ಮಾಡುವುದರ ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಸುಮಾರು ಒಂದು ಲಕ್ಷ ಸಸಿಗಳನ್ನು ನೆಡುವ ಮೂಲಕ ಪರಿಸರ ಮತ್ತು ಗ್ರಾಹಕರ ರಕ್ಷಣೆಯನ್ನು ಉತ್ತೇಜಿಸುತ್ತದೆ ಎಂದರು.

ಬೈಟ್ ಬಳಿಕ ಮಾತು ಮುಂದುವರೆಸಿದ ಅವರು, ರಕ್ತಹೀನತೆ ಮುಕ್ತ ಮತ್ತು ಅಪೌಷ್ಟಿಕತೆ ಮುಕ್ತ ಭಾರತದ ಬಗ್ಗೆ ಅವರಲ್ಲಿ ಅರಿವು ಮೂಡಿಸಿ.ಭಾರತದ ಶಕ್ತಿಯು ಮಾತೃಶಕ್ತಿಗೆ ಸಂಬಂಧಿಸಿದೆ ಎಂಬ ಪರಿಕಲ್ಪನೆಗೆ ನಾವು ಮಹಿಳಾ ಶಿಕ್ಷಣದ ಮೇಲೆ ಬೆಳಕು ಚೆಲ್ಲುತ್ತೇವೆ. ನಮ್ಮ ಪ್ರಯಾಣವು ಫಿಟ್ ಇಂಡಿಯಾ, ಗ್ರಾಹಕ ಮತ್ತು ಅದರ ಹಕ್ಕುಗಳ ಕಡೆಗೆ ಜಾಗೃತಿ ಮೂಡಿಸುತ್ತದೆ. ಇನ್ಕ್ರೆಡಿಬಲ್ ಇಂಡಿಯಾ ರೋಲರ್ ಸ್ಕೇಟ್ಸ್ ಪ್ರವಾಸವು ಕನ್ಯಾಕುಮಾರಿಯ ವಿವೇಕಾನಂದ ರಾಕ್‌ನಲ್ಲಿ ಡಿಸೆಂಬರ್ 25 ರಂದು ಮುಕ್ತಾಯಗೊಳ್ಳಲಿದೆ ಎಂದರು.

ತಂಡಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯು ಪ್ರಾಯೋಜಕತ್ವ ನೀಡಿದೆ. ಸರ್ಕಾರದಿಂದ ಯಾವುದೇ‌ ಸಹಕಾರವಿಲ್ಲ. ಸಂಘ ಸಂಸ್ಥೆಗಳು ಸಹಾಯ ಮಾಡಿದರೆ ಸ್ವೀಕರಿಸುತ್ತೇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!