ಕರಾವಳಿ

ಡಿ. 26 ರಿಂದ ಜ. 4- ಬ್ರಹ್ಮಾವರ ರುಡ್ ಸೆಟ್ ನಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ
ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆನರಾ
ಬ್ಯಾಂಕ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೊಂದಿಗೆ ಸಂಪೂರ್ಣ ಉಚಿತ ಅಣಬೆ ಬೇಸಾಯ ತರಬೇತಿ ದಿನಾಂಕ 26.12.2022 ರಿಂದ 04.01.2023ರ ವರೆಗೆ
10 ದಿನಗಳ ಕಾಲ ನಡೆಯಲಿದೆ.

ಈ ತರಬೇತಿಗೆ ಹೆಚ್ಚು ಬೇಡಿಕೆ ಇದೆ. ಅಣಬೆ ಚೌಷಧೀಯ ಗುಣ ಹೊಂದಿದ್ದು ಮತ್ತು ಇದು ಒಂದು ಆಹಾರ ವಸ್ತು ಆಗಿರುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಲಿದೆ. ಈ ತರಬೇತಿಯಲ್ಲಿ ಅಣಬೆ ಬೇಸಾಯ ಮಾಡಿ ಅದರ ವ್ಯವಹಾರ ನಡೆಸಲು ಬೇಕಾದ ಮಾರುಕಟ್ಟೆ ನಡೆಸುವ ಬಗ್ಗೆ, ಬ್ಯಾಂಕಿನ
ವ್ಯವಹಾರ, ಸರಕಾರಿ ಯೋಜನೆಗಳು, ಯೋಜನಾ ವರದಿ
ತಯಾರಿಸುವ ಬಗ್ಗೆ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವ ವಿಧಾನ, ಅವಲಂಬನೆ ಇಲ್ಲದೆ ವ್ಯವಹಾರಿಸುವುದು, ರಿಸ್ಕ್ ತೆಗೆದುಕೊಳ್ಳವ ರೀತಿ, ಗುಣಮಟ್ಟದ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ವಿಶೇಷವಾದ ತರಬೇತಿ ನೀಡಲಾಗುವುದು.

ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು. ಕನ್ನಡ ಓದಲು ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ ನಂ. ಜನ್ಮ ದಿನಾಂಕ ಬರೆದು ನೀವು ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ನಿಮ್ಮ ಹೆಸರು ಇರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂ. ಕಳುಹಿಸಿ
ಕೊಡಿ.

ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು,
ಬ್ರಹ್ಮಾವರ-576213 ಉಡುಪಿ ಜಿಲ್ಲೆ. ವಾಟ್ಸಪ್ ನಂ. 9632561145,9448348569,9844086383,9611544930,9591233748, 8861325564. ವೆಬ್ ಸೈಟ್ ನ ಮೂಲಕ ಸಹ  ಅರ್ಜಿ ಸಲ್ಲಿಸಬಹುದು. http://www.rudsetitraining.org
ಇ-ಮೇಲ್ ವಿಳಾಸ -rudbvr@gmail.com

Related Articles

Leave a Reply

Your email address will not be published. Required fields are marked *

Back to top button
error: Content is protected !!