ದೇವಾಡಿಗರ ಸಂಘ ಉಪ್ಪುಂದ ವತಿಯಿಂದ ಇಂದು ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕೋತ್ಸವ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಮಹಾಸಭೆ
ಬೈಂದೂರು : ದೇವಾಡಿಗರ ಸಂಘ ( ರಿ.) ಉಪ್ಪುಂದ.
(ಉಪ್ಪುಂದ, ಬಿಜೂರು,ಕೆರ್ಗಾಲ್ ಗ್ರಾಮ ಪಂಚಾಯತ್ ವ್ಯಾಪ್ತಿ) ಇಂದು ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕೋತ್ಸವ ವಿದ್ಯಾರ್ಥಿ ವೇತನ ವಿತರಣೆ ,ಹಾಗೂ ಮಹಾಸಭೆಯ ಮಾತೃಶ್ರೀ ಸಭಾಭವನ ಉಪ್ಪುಂದದಲ್ಲಿ ಸಂಭ್ರಮದಲ್ಲಿ ನಡೆಯಿತು.
ಡಾ.ಕೆ ವಿ ದೇವಾಡಿಗ ಖ್ಯಾತ ನರರೋಗ ತಜ್ಞರು ಮಂಗಳೂರುಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ ಶುಭ ಹಾರೈಸಿದರು.ಪ್ರಾಸ್ತಾವಿಕ ಮಾತು ಜನಾರ್ದನ ಎಸ್ ದೇವಾಡಿಗ ಗೌರವಾಧ್ಯಕ್ಷರು ಮಾತನಾಡಿದರು..
ಮಾಧವ ದೇವಾಡಿಗ ಹೂಗಿನಹಿತ್ಲು ಅಧ್ಯಕ್ಷರು ದೇವಾಡಿಗರ ಸಂಘ (ರಿ.) ಉಪ್ಪುಂದ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಕರ್ನಾಟಕದ ಮೂರನೇ ನರರೋಗ ತಜ್ಞರಾಗಿ ಪ್ರಖ್ಯಾತ ಡಾ.ಕೆ ವಿ ದೇವಾಡಿಗ ಖ್ಯಾತ ನರರೋಗ ತಜ್ಞರು ಮಂಗಳೂರು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಧನಸಾಯ ಮಾಡಲಾಯಿತು.
ಧರ್ಮಪಾಲ್ ದೇವಾಡಿಗ ಅಧ್ಯಕ್ಷರು ವಿಶ್ವ ದೇವಾಡಿಗ ಮಹಾಮಂಡಲ ಇವರು ತುರ್ತು ನಿಧಿ ಉದ್ಘಾಟನೆ ಮಾಡಿದರು.ಸಭಾ ಕಾರ್ಯಕ್ರಮದ ಬಳಿಕ ವೇದಿಕೆ ನಮ್ಮದು ಪ್ರತಿಭೆ ನಿಮ್ಮದು ಮಕ್ಕಳ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು..
ಈ ಸಂದರ್ಭದಲ್ಲಿ ಡಾ.ದೇವರಾಜ್, ಎಚ್ ಮೋಹನ್ ದಾಸ್, ಅಣ್ಣಯ್ಯ ಶೇರಿಗಾರ್ , ಪ್ರವೀಣ್ ದೇವಾಡಿಗ , ರವಿ ದೇವಾಡಿಗ , ಸೀತಾರಾಮ ದೇವಾಡಿಗ , ಶ್ರೀ ಮತಿ ಕುಸುಮ ಎಚ್ ದೇವಾಡಿಗ, ವಾಸುದೇವ ದೇವಾಡಿಗ , ಭರತ್ ದೇವಾಡಿಗ , ನಾಗೇಶ್ ದೇವಾಡಿಗ.ಮಂಜು ದೇವಾಡಿಗ ಅರೆಹಾಡಿ, ಗಣಪತಿ ದೇವಾಡಿಗ , ರಾಮ ದೇವಾಡಿಗ ಬೈಂದೂರು, ಶ್ರೀ ಮತಿ ಬೇಬಿ ಯು. ದೇವಾಡಿಗ ಹಾಗೂ ಉಪ್ಪುಂದ ದೇವಾಡಿಗ ಸಂಘದ ವ್ಯಾಪ್ತಿಯ ಸರ್ವ ಸದಸ್ಯರು ಹಾಗೂ ದೇವಾಡಿಗ ಭಾಂಧವರು ಉಪಸ್ಥಿತರಿದ್ದರು.
ಶ್ರೀಲತಾ ದೇವಾಡಿಗ,ಸುಧಾಕರ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ನರಸಿಂಹ ದೇವಾಡಿಗ ವಂದಿಸಿದರು.