ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಉಡುಪಿ: ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ಹಿರಿಯ ನಾಗರಿಕರ ಸಂಘ (ಆರ್) ಉಡುಪಿ, ನವೋದಯ ಸ್ವಸಹಾಯ ಸಂಘಗಳು ಉಡುಪಿ, ಉಡುಪಿ ಜಿಲ್ಲಾ ಆಟೋಉಡುಪಿ ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್, ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘ ಉಡುಪಿ, ಜನಮಿತ್ರ ಗ್ರಾಮ ಒಂದು ಕೇಂದ್ರ ತೆಂಕನಿಡಿಯೂರು ಮತ್ತು ಆದಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸದಾನಂದ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ತ್ರೀ ರೋಗ ತಜ್ಞರು ಡಾ.ರಂಜಿತಾ ಎಸ್.ನಾಯಕ್, “ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಮಾಲಿಕರಾದ ರವೀಂದ್ರ ಶೆಟ್ಟಿ ಮತ್ತು ಈ ಕಾರ್ಯವನ್ನು ಬೆಂಬಲಿಸಿದ ಎಲ್ಲಾ ಸಂಘದವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೆಚ್ಚು ಹೆಚ್ಚು ಜನರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಫಿಸಿಯೋಥೆರಪಿಸ್ಟ್ ಡಾ.ದೀಪಾ ನಾಯಕ್ ಮಾತಾನಡಿ, “ಫಿಸಿಯೋಥೆರಪಿಯು ಅಡಗಿರುವ ನೋವುಗಳನ್ನು ಗುಣಪಡಿಸುವ ಚಿಕಿತ್ಸೆಯಾಗಿದೆ. ಫಿಸಿಯೋಥೆರಪಿ ಸರಳವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯು ಎಷ್ಟು ಕ್ರಿಯಾಶೀಲನಾಗಿರುತ್ತಾನೋ ಅಷ್ಟು ಆರೋಗ್ಯವನ್ನು ಹೊಂದಿರುತ್ತಾನೆ” ಎಂದು ಹೇಳಿದರು.
ಚರ್ಮರೋಗ ತಜ್ಞ ರಾದ ಡಾ.ಅರುಣ್ ಶೆಟ್ಟಿ ಕೆ, ಮನೋವೈದ್ಯರಾದ ಡಾ.ರಿತಿಕಾ ಸಾಲ್ಯಾನ್, ಸೀನಿಯರ್ ಚೇಂಬರ್ ಟೆಂಪಲ್ ಸಿಟಿ ಲೀಜನ್ ಅಧ್ಯಕ್ಷರಾದಜಗದೀಶ್ ಕೆಮ್ಮಣ್ಣು, ಉಡುಪಿ ಜಿಲ್ಲಾ ಆಟೋ ಯೂನಿಯನ್ ಅಧ್ಯಕ್ಷರಾದ ಸುರೇಶ್ ಅಮೀನ್, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಮಾಲಿಕರಾದ ರವೀಂದ್ರ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಚಿತ ಸಮಾಲೋಚನೆ ಮತ್ತು ಪರೀಕ್ಷೆ, ಇಸಿಜಿ ಪರೀಕ್ಷೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ಔಷಧಿಗಳು, ರಕ್ತ ಮತ್ತು ಮೂತ್ರ ಪರೀಕ್ಷೆ ಮತ್ತು ಉಚಿತ ಫಿಸಿಯೋಥೆರಪಿ ಸಮಾಲೋಚನೆ ಒಳಗೊಂಡಿತ್ತು.