MSME ಕಾನೆ ಕೀವ್ – 2023, ಹೊಸಪೇಟೆಯಲ್ಲಿ ಸಿಎ ಎಸ್.ಎಸ್.ನಾಯಕ್ ಅವರಿಗೆ “ಮೆಂಟರ್ ಆಫ್ ಮೆಂಟರ್ಸ್” ಪ್ರಶಸ್ತಿ ಪ್ರದಾನ
2023 ರ ಜನವರಿ 20 ರಂದು ಹೊಸಪೇಟೆಯ ಹೋಟೆಲ್ ಮಲ್ಲಿಗೆಯಲ್ಲಿ ನಡೆದ ಪ್ರತಿಷ್ಠಿತ ಎಮ್.ಎಸ್.ಎಮ್.ಇ
ಕಾನೆ ಕಿವ್ 2023 ರಲ್ಲಿ ಸಿಎ ಎಸ್. ಎಸ್. ನಾಯಕ್ ಅವರಿಗೆ “ಮೆಂಟರ್ ಆಫ್ ಮೆಂಟರ್ಸ್” ಎಂಬ ಪ್ರಶಸ್ತಿಯನ್ನು ನೀಡಲಾಯಿತು. ಐಸಿಎಐ ಬಳ್ಳಾರಿ, ಹುಬ್ಬಳ್ಳಿ ಮತ್ತು ಬೆಳಗಾವಿ ಶಾಖೆಗಳು ಹಾಗೂ ಅಟಲ್ ಇನ್‌ಕ್ಯುಬೇಶನ್ ಸೆಂಟರ್, ನಿಟ್ಟೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಿಎ ಪನ್ನಾ ರಾಜ್ ಎಸ್., ಉಪಾಧ್ಯಕ್ಷರು, ಎಸ್. ಐ. ಆರ್. ಸಿ. ಆಫ್ ಐಸಿಎಐ, ಶ್ರೀ ಅಶ್ವಿನ್ ಕೋತಂಬ್ರಿ, ಅಧ್ಯಕ್ಷರು, ವಿಜಯನಗರ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಸಿಎ ಕೆ. ಗುರುರಾಜ್ ಆಚಾರ್ಯ, ನಿರ್ದೇಶಕರು, ಕರ್ಣಾಟಕ ಬ್ಯಾಂಕ್, ಸಿಎ ವಿನೋದ್ ಬಗ್ರೇಚಾ, ಅಧ್ಯಕ್ಷರು, ಐಸಿಎಐನ
ಬಳ್ಳಾರಿ ಶಾಖೆ, ಡಾ.ಎ.ಪಿ.ಆಚಾರ್, ಸಿಇಒ, AIC ನಿಟ್ಟೆ ಇನ್ಮುಬೇಶನ್ ಸೆಂಟರ್, ಡಾ.ಎಂ.ಜಿ. ಅನಂತ ಪ್ರಸಾದ್,
ಸಿಇಒ, AIC – ಜ್ಯೋತಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಫೌಂಡೇಶನ್, ಬೆಂಗಳೂರು, ಶ್ರೀ ಪ್ರದೀಪ್ ನಾಯರ್, ಡಿಜಿಎಂ (B&O), ಆಡಳಿತ ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಳ್ಳಾರಿ, ಶ್ರೀ. ಎ ರಾಜಮಣಿ, ಡಿಜಿಎಂ- ಪ್ರಾದೇಶಿಕ ಮುಖ್ಯಸ್ಥರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶಿವಮೊಗ್ಗ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಕಳೆದ ಮೂರು ದಶಕಗಳಿಂದ ವರ್ಷಗಳಿಂದ ಸಾವಿರಾರು ಎಮ್.ಎಸ್.ಎಮ್.ಇ ಉದ್ಯಮಗಳಿಗೆ ಹಾಗೂ ವೃತ್ತಿಪರ ಲೆಕ್ಕ ಪರಿಶೋಧಕರಿಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವುದರಿಂದ ಸಿಎ ಎಸ್. ಎಸ್. ನಾಯಕ್
ಅವರಿಗೆ “ಮೆಂಟರ್ ಆಫ್ ಮೆಂಟರ್ಸ್” ಎಂಬ ಬಿರುದು ಸೂಕ್ತವಾಗಿದೆ . ಇವರು ಎಮ್.ಎಸ್.ಎಮ್.ಇ ಗಳಿಗೆ
ಸಂಬಂಧಿಸಿದ ವಿಷಯಗಳ ಕುರಿತು ವಿವಿಧ ಸೆಮಿನಾರ್‌ಗಳು, ಕಾಶ್ಮೀವ್‌ಗಳು ಮತ್ತು ತರಬೇತಿಗಳನ್ನು
ನಡೆಸುತ್ತಿದ್ದಾರೆ.ಇವರು ಇತ್ತೀಚೆಗೆ 200 ಸಂಚಿಕೆಗಳನ್ನು ಪೂರ್ಣಗೊಳಿಸಿದ ತಮ್ಮ ಟಿವಿ ಕಾರ್ಯಕ್ರಮ “ಬಿಸಿನೆಸ್
ಟಾನಿಕ್” ನಲ್ಲಿ ಕೂಡ ಎಮ್.ಎಸ್.ಎಮ್.ಇ ಗಳಿಗೆ ಬೇಕಾಗುವ ಅನೇಕ ವಿಷಯಗಳ ಬಗ್ಗೆ ಮಾರ್ಗದರ್ಶನ
ನೀಡುತ್ತಿದ್ದಾರೆ. ಸಿಎ ಎಸ್. ಎಸ್. ನಾಯಕ್ ರವರು ಪ್ರಶಸ್ತಿಯ ಬಗ್ಗೆ ಹರ್ಷ ವ್ಯಕ್ತ ಪಡಿಸಿ, ನಮ್ಮ ದೇಶದ ಅಭಿವೃದ್ಧಿಗೆ ಎಮ್.ಎಸ್.ಎಮ್.ಇ ಗಳ ಪಾತ್ರವನ್ನು ಶ್ಲಾಘಿಸಿದರು ಹಾಗು ಎಮ್.ಎಸ್.ಎಮ್.ಇ ಗಳಿಗೆ ನಿರಂತರ ನೀಡುವುದು ನನ್ನ ಪ್ರವೃತ್ತಿ ಎಂದರು.