ಕರಾವಳಿ ಜಿಲ್ಲೆಯ ಅತಿ ದೊಡ್ಡ ಸೋಡಿಗದ್ದೆ ಸೋಡಿಗದ್ದೆ ಜಾತ್ರೆ : ಕೆಂಡ ಸೇವೆಗೈದ ಸಾವಿರಾರು ಭಕ್ತರು
ಭಟ್ಕಳ:ಕರಾವಳಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯು ಜನವರಿ 23 ರ ಸೋಮವಾರದಂದು 9 ದಿನಗಳ ನಡುವೆ ಜಾತ್ರೆಯನ್ನು ವಿದ್ಯುಕ್ತವಾಗಿ ಆರಂಭವಾಯಿತು.
ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ ಅಶೋಕ ಭಟ್ಟ ಮಾಹಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರಾ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಇನ್ನೂ ಸಾವಿರಾರು ಭಕ್ತರು ದೇವಸ್ಥಾನದ ಬಳಿ ಸರತಿ ಸಾಲಿನಲ್ಲಿ ನಿಂತು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ಮೊದಲ ದಿನ ಭಕ್ತರಿಗೆ ಮಹಾಸತಿ ದೇವಸ್ಥಾನ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಾಡಿಸಲಾಗಿತ್ತು
ದೇವಸ್ಥಾನದ ಸುತ್ತಮುತ್ತ ಬಗೆಬಗೆ ಅಂಗಡಿಗಳು ತೆರೆದುಕೊಂಡು ಜಾತ್ರೆಗೆ ವಿಶೇಷ ಕಳೆ ತಂದು ಕೊಟ್ಟವು.ಹಲವು ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದ ಕಮಿಟಿ ಇಂದ ತಹಶೀಲ್ದಾರ ಅಶೋಕ ಭಟ್ಟ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಮಂಗಳವಾರ ಜಾತ್ರೆಯ 2 ದಿನ ವಿಶೇಷ ಕೆಂಡಸೇವೆ ನಡೆಯಲಿದೆ. ದೇವಸ್ಥಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಸೂಸಗಡಿ ಪ್ರಭಾರಿ ಕಂದಾಯ ನಿರೀಕ್ಷಕ ಕೆ ಶಂಭು,ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷರು ಕಮಿಟಿ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು.