ಕರಾವಳಿ

ಮಣಿಪಾಲದಲ್ಲಿ ರಾಷ್ಟ್ರೀಯ ಸ್ತ್ರೀ ಮೂತ್ರರೋಗಾಶಾಸ್ತ್ರ ವಿಚಾರ ಸಂಕಿರಣ

ಮಣಿಪಾಲ : ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ
ಉಪವಿಭಾಗವಾಗಿರುವ ಸ್ತ್ರೀ ಮೂತ್ರರೋಗಶಾಸ್ತ್ರ ವಿಭಾಗವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ರಾಷ್ಟ್ರೀಯ ಸ್ತ್ರೀಮೂತ್ರರೋಗಶಾಸ್ತ್ರ ವಿಚಾರ ಸಂಕಿರಣ (ಉರ್ವಶೆ 2023) ನಡೆಯಿತು. ದೇಶದ ವಿವಿಧ ಭಾಗಗಳಿಂದ ಸ್ತ್ರೀ ಶೋಣಿಯ (ಸ್ತ್ರೀ ಪೆಲ್ವಿಕ್) ಮೆಡಿಸಿನ್ ಮತ್ತು ಪುನರ್ನಿಮರ್ಾಣ ಶಸ್ತ್ರಚಿಕಿತ್ಸೆಯ
ಭರವಸೆಯ ಕುರಿತು ರಾಷ್ಟ್ರೀಯ ದಿಗ್ಗಜರ ಸಮ್ಮೇಳನ ಇದಾಗಿತ್ತು. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆಎಂಸಿ ಮಣಿಪಾಲದ ಸಹ ಡೀನ್ ಡಾ. ಕೃಷ್ಣನಾದ ಪ್ರಭು ಆರ್.ವಿ ಭಾಗವಹಿಸಿದ್ದರು.

ಸ್ತ್ರೀ ಮೂತ್ರರೋಗ ಶಾಸ್ತ್ರ ವಿಭಾಗದ ಫೆಲೋಶಿಪ್ ನಿರ್ದೇಶಕಿ ಮತ್ತು ಮುಖ್ಯಸ್ಥರಾದ ಡಾ. ದೀಕ್ಷಾ ಪಾಂಡೆ ಅವರು ಉರ್ವಶ 2023 ಅನ್ನು ಪರಿಚಯಿಸಿದರು. ಏಕೆಂದರೆ ಅದು ಅವರ ಕನಸಿನ ಕೂಸು, ಅವರು ಅದನ್ನು ಆರಂಭಿಸಿ ಮತ್ತು ಫಲಪ್ರದದಿಂದ ಪೋಷಿಸಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದಮುಖ್ಯಸ್ಥರಾದ ಡಾ.ಶ್ರೀಪಾದ ಹೆಬ್ಬಾರ್ ಸ್ವಾಗತಿಸಿ ತಮ್ಮ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಮೂಲಕ ಸಮ್ಮೇಳನದ
ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ನವದೆಹಲಿಯ ಏಮ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಜೆ.ಬಿ. ಶರ್ಮಾ, ಹೈದರಾಬಾದ್‌ನ ಡಾ. ಅನುರಾಧಾ ಕೊಡೂರಿ, ಮುಂಬೈನ ಪ್ರಸಿದ್ಧ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಾದ ಡಾ. ಅಪರ್ಣಾ ಹೆಗ್ಡೆ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ಧರು.

ಡಾ. ದೀಕ್ಷಾ ಪಾಂಡೆ ಮತ್ತು ಇತರ ಸಂದರ್ಶಕ ಅಧ್ಯಾಪಕರು
ಸಂಚಾಲಕರಾಗಿ ನಿವಾಸಿ ವೈದ್ಯರುಗಳು ಮತ್ತು
ಸಹೋದ್ಯೋಗಿಗಳಿಂದ ಪ್ರಕರಣದ ಚರ್ಚೆಗಳು ಮತ್ತು ಮಾತುಕತೆ ನಡೆದವು, ಭಾರತದಾದ್ಯಂತ ಅನೇಕ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!