ಕರಾವಳಿ
ಕಾರಾಗೃಹ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಮಂಗಳೂರು: ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಕಾರಾಗೃಹ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ವೃಂದದ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ 2021 ನೇ ಸಾಲಿನ ಮುಖ್ಯಮಂತ್ರಿ ಅವರ ಪದಕ ಪ್ರಕಟಿಸಲಾಗಿದೆ.
ಮುಖ್ಯಮಂತ್ರಿ ಪದಕಕ್ಕೆ ಉಡುಪಿ ಜಿಲ್ಲಾ ಕಾರ್ಯಗ್ರಹದ ಸಹಾಯಕ ಜೈಲರ್ ಪುಟ್ಟಣ್ಣ ಆಚಾರಿ, ಮಂಗಳೂರು ಜಿಲ್ಲಾ ಕಾರಾಗೃಹದ ಸಹಾಯಕ ಜೈಲರ್ ಬಸಪ್ಪ ದೇವೇಂದ್ರಪ್ಪ ತವರಿ, ಮುಖ್ಯವೀಕ್ಷಕರಾದ ವಿಠಲ ಮಲಕಪ್ಪ ಕೊಂಡಗೋಳಿ, ಇಸ್ಮಾಯಿಲ್ ಜಬೀವುಲ್ಲಾ ಐ. ಎಂಬವರು ಆಯ್ಕೆಯಾಗಿದ್ದಾರೆ.