ಹಳಗೇರಿ ಶ್ರೀ ಗೆಂಡದ ಹೖಾಗೂಳಿ, ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನ 1ಕೋಟಿ.75ಲಕ್ಷ ವೆಚ್ಚದ ತ್ರಾಮ ಲೇಪಿತ ಶಿಲಾಮಯ ದೈವಾಲಯ ಲೋಕಾರ್ಪಣೆ
ಬೈಂದೂರು: ಬೈಂದೂರು ತಾಲೂಕಿನ 600ವರ್ಷ ಇತಿಹಾಸ ಪ್ರಸಿದ್ಧ ಹಳಗೇರಿ ಶ್ರೀ ಗೆಂಡದ ಹೖಾಗೂಳಿ, ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನ 1ಕೋಟಿ.75ಲಕ್ಷ ವೆಚ್ಚದ ತ್ರಾಮ ಲೇಪಿತ ಶಿಲಾಮಯ ದೈವಾಲಯ ಲೋಕಾರ್ಪಣೆ ಸಂಭ್ರಮದಲ್ಲಿ ನಡೆಯಿತು.
ದೇವರ ಹಾಗೂ ದೈವಗಳ ಜೀಣೋದ್ಧಾರ, ಪುನರ್ ಪ್ರತಿಷ್ಠೆ ಕಾರ್ಯ ಶುಭದ ಸಂಕೇತವಾಗಿದ್ದು ಇದರಿಂದ ಜನರಿಗೆ, ನಂಬಿದ ಭಕ್ತರಿಗೆ, ಊರಿಗೆ ಒಳಿತು ಉಂಟಾಗುತ್ತದೆ. ಜೀವನದ ನೋವುಗಳ ಪರಿಹಾರಕ್ಕಾಗಿ ದೈವಗಳ ಮೇಲೆ ಅಪಾರ ಭಕ್ತಿ, ಶ್ರದ್ಧೆಯನ್ನು ಹೊಂದಿದ್ದು ದೈವತ್ವದ ಶಕ್ತಿಗಳು ನಮ್ಮನ್ನು ಸದಾ ಕಾಪಾಡಲಿದೆ ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಕಂಬದಕೋಣೆ ಹಳಗೇರಿ ಶ್ರೀ ಗೆಂಡದ ಹೖಾಗೂಳಿ, ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನದಲ್ಲಿ ಸುಮಾರು 1ಕೋಟಿ.75ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ತ್ರಾಮ ಲೇಪಿತ ಶಿಲಾಮಯ ದೈವಾಲಯ ಸಮರ್ಪಣೆಯ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಧಾರ್ಮಿಕ ಪ್ರವಚನ ನೀಡಿದರು. ತಾ.ಪಂ.ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತೆಂಕಬೆಟ್ಟು ಟಿ.ನಾಗಪ್ಪಯ್ಯ ನಾವಡ, ಕಂಬದಕೋಣೆ ಗ್ರಾ.ಪಂ.ಅಧ್ಯಕ್ಷ ಹೆಚ್.ಸುಕೇಶ ಶೆಟ್ಟಿ ಹಳಗೇರಿ, ದೈವಸ್ಥಾನದ ಅರ್ಚಕ ರಾಮಚಂದ್ರ ನಾವಡ, ದೈವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ನಾವಡ, ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.
ಸರಕಾರದಿಂದ ಅನುದಾನ ಒದಗಿಸಿಕೊಟ್ಟ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರನ್ನು ದೈವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ , ದೈವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ನಾವಡ, ಆಡಳಿತ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ದೈವಸ್ಥಾನ ನಿರ್ಮಾಣದ ಶಿಲ್ಪಿ ರಾಘವೇಂದ್ರ, ಸಂತೋಷ, ಗಣೇಶ, ಶ್ರೀಕಾಂತ್, ನಾಗರಾಜ ಹಾಗೂ ದಾನಿಗಳನ್ನು ಅವರನ್ನು ಗೌರವಿಸಲಾಯಿತು.
ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈವಸ್ಥಾನದ ಆಡಳಿತ ಮಂಡಳಿ ಆಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಬೈಂದೂರು-ಉಪ್ಪುಂದ ಲಯಲ್ಸ್ ಕ್ಲಬ್ ಅಧ್ಯಕ್ಷ ರವಿರಾಜ ಚೇರ್ಕಾಡಿ ವಂದಿಸಿದರು.