ಕುಂದಾಪುರ : ಮಹಿಳೆ ಆತ್ಮಹತ್ಯೆ
ಕುಂದಾಪುರ : ಅನಾರೋಗ್ಯದಿಂದ ಮನನೊಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಯಂತಿ (42) ಆತ್ಮಹತ್ಯೆ ಮಾಡಿಕೊಂಡವರು.
ನಿನ್ನೆ ಬೆಳಿಗ್ಗೆ ಎದ್ದು ನೋಡಿದಾಗ ಜಯಂತಿ ಅವರು ಮನೆಯಲ್ಲಿ ಕಾಣದೇ ಇದ್ದಾಗ ಮನೆಯ ಹೊರಗೆ
ಬಂದು ನೋಡಿದಾಗ ಅವರು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ನೇಣಿನಿಂದ ಕೆಳಗಿಳಿಸಲಾಯಿತಾದರೂ ಅವರು ಅದಾಗಲೇ ಮೃತ ಪಟ್ಟಿದ್ದರು. ಜಯಂತಿ ರವರಿಗೆ ಕಳೆದ
2 ವರ್ಷದಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಪ್ರತಿದಿನ ವಿಪರೀತ ನೋವಿನಿಂದ ನರಳಾಡುತ್ತಿದ್ದುದರಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಫೆ.1 ರ ರಾತ್ರಿಯಿಂದ ಫೆ.2ರ ಬೆಳಗ್ಗಿನ ನಡುವಿನ ಅವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಪತಿ
ಜಗದೀಶ ಎಂಬವರು ನೀಡಿದ ದೂರಿನಂತೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.