ನರ್ತಕಿ ಬಾರ್ ನಲ್ಲಿ ಮಾಲೀಕನ ಮೇಲೆ ಹಲ್ಲೆ – ಐದು ಮಂದಿ ದುಷ್ಕರ್ಮಿಗಳ ಅರೆಸ್ಟ್
ಉಡುಪಿ: ಸಾಲಿಗ್ರಾಮದ ಚಿತ್ರಪಾಡಿಯಲ್ಲಿರುವ ನರ್ತಕಿ ಬಾರ್ ನಲ್ಲಿ ದುಷ್ಕರ್ಮಿಗಳ ಗುಂಪೊಂದು ಬಾರ್ ನಲ್ಲಿ ಗಲಾಟೆ ನಡೆಸಿ ಮಾಲೀಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಲಿಗ್ರಾಮದ ಚಿತ್ರಪಾಡಿ ಬಳಿ ಇರುವ ನರ್ತಕಿ ಬಾರ್ ನಲ್ಲಿ ಈ ಗಲಾಟೆ ನಡೆದಿದ್ದು, ಬಾರ್ ಮಾಲೀಕ ರಿತೇಶ್ ಮೇಲೆ ಹಲ್ಲೆ ನಡೆಸಲಾಗಿದೆ.5 ಮಂದಿ ದುಷ್ಕರ್ಮಿಗಳು ಮದ್ಯ ಸೇವನೆ ಮಾಡುವ ನೆಪದಲ್ಲಿ ಬಂದಿದ್ದು, ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿ ಬಾರ್ ಮಾಲೀಕ ರಿತೇಶ್‌ನನ್ನು ನೆಲಕುರುಳಿಸಿ ಚಪ್ಪಲಿಯಿಂದ ತುಳಿದ ಹಲ್ಲೆ ನಡೆಸಿದ್ದಾರೆ.
ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರನ್ನು ರೋಹಿತ್, ರಂಜಿತ್, ಸಚಿನ್ ಶಶಾಂಕ್ ವಿಘ್ನೇಶ್ ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.