ಕರಾವಳಿ

ಉಡುಪಿ: ಕೆವೈಸಿ ಅಪ್‌ಡೇಟ್ ನೆಪದಲ್ಲಿ ವ್ಯಕ್ತಿಗೆ 1.06 ಲಕ್ಷ ರೂ. ವಂಚನೆ

ಉಡುಪಿ : ಕೆವೈಸಿ ಅಪ್ ಡೇಟ್ ಮಾಡುವ ನೆಪದಲ್ಲಿ
ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಖಾತೆ ವಿವರ ಪಡೆದು 1.06 ಲಕ್ಷ ರೂ. ಅನೈನ್ ಮುಖಾಂತರ ದೋಚಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಣಿಪಾಲ ಅಲೆವೂರು ರಸ್ತೆಯ ಎ.ಎಲ್.ಎನ್ ರಾವ್ ಲೇಯೌಟ್ ನಿವಾಸಿ ಸ್ಪ್ಯಾನ್ದೀ .ಪಿ. ಕುಂದರ್ ಅವರು ತಮ್ಮ ಮೊಬೈಲ್ ಗೆ 2022ರ ನ.3 ರಂದು ಕೆವೈಸಿ ಅಪ್‌ಡೇಟ್ ಸಲುವಾಗಿ ಬಂದ ಸಂದೇಶವನ್ನು ನಂಬಿ ಆ ಸಂದೇಶದಲ್ಲಿ ಸೂಚಿಸಿದ ನಂಬರ್ ಗೆ ಕರೆ ಮಾಡಿದ್ದರು. ಬಳಿಕ ಎರಡು
ದಿನಗಳ ಹಿಂದೆ ಫೆ.2 ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಸ್ಕ್ಯಾನ್ದೀ ಪಿ. ಕುಂದರ್ ಅವರ ಬ್ಯಾಂಕ್
ಖಾತೆಯ ವಿವರಗಳನ್ನು ಹಾಗೂ ಒಟಿಪಿಯನ್ನು ಪಡೆದುಕೊಂಡು ಅವರ ಖಾತೆಯಿಂದ ಹಂತ
ಹಂತವಾಗಿ 1,06,826 ರೂ. ಹಣವನ್ನು ಆನ್ ಮೂಲಕ ದೋಚಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!