ಕರಾವಳಿ

ಫೆ. 7 ರಂದು ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ,: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ
ಕಾರಣದಿಂದ ಫೆಬ್ರವರಿ 7 ರಂದು ಈ ಕೆಳಕಂಡ ಸ್ಥಳಗಳಲ್ಲಿ
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು
ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 33/11 ಕೆವಿ ಹೆಬ್ರಿ ಉಪ ವಿದ್ಯುತ್ ಸ್ಥಾವರದಲ್ಲಿ ನಿರ್ವಹಣಾ ಕಾಮಗಾರಿಯನ್ನು
ಹಮ್ಮಿಕೊಂಡಿರುವುದರಿಂದ 11ಕೆವಿ ವಾಟರ್ ಸಪ್ಪೆ, ನಾಡ್ತಾಲು ಫೀಡರ್‌ನಲ್ಲಿ ವಿದ್ಯುತ್ಅ ಡಚಣೆಯಾಗುವುದರಿಂದ, 33/11ಕೆವಿ ಹೆಬ್ರಿ ಉಪಕೇಂದ್ರದಿಂದ ಸರಬರಾಜಾಗುವ ಹುಟ್ಟುರ್ಕೆ ವಾಟರ್
ಸಪ್ಪೆ, ಕಲ್ಲಿಲ್ಲು ವಾಟರ್ ಸಪ್ಪೆ, ಸೀತಾನದಿ, ಸೋಮೇಶ್ವರ,
ನಾಕ್ಸಾಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಲ್ಲಿ 110 ಕೆ.ವಿ ಬಸ್‌ನ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಸದರಿ ಸ್ಥಾವರದಿಂದ ಹೊರಡುವ ಮಣಿಪಾಲ, ನಿಟ್ಟೂರು, ಬ್ರಹ್ಮಾವರ,
33ಕೆವಿ ಶಿರ್ವ, 33ಕೆವಿ ಕುಂಜಿಬೆಟ್ಟು 1 ಮತ್ತು 2 ಮಾರ್ಗಗಳಲ್ಲಿ 33 ಕೆವಿ ಮಲ್ಪೆ/ಉದ್ಯಾವರ ಹಾಗೂ ಎಲ್ಲಾ 11ಕೆವಿ ಫೀಡರಿನಲ್ಲಿ ಉಡುಪಿ, ಮಣಿಪಾಲ, ಕುಂಜಿಬೆಟ್ಟು, ನಿಟ್ಟೂರು, ಮಲ್ಪೆ ಉದ್ಯಾವರ, ಶಿರ್ವ, ಬ್ರಹ್ಮಾವರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಾಪು ತಾಲೂಕು ಬೆಳಪು ಗ್ರಾಮದಲ್ಲಿ 2*10 ಎಂ.ವಿ.ಎ,
110/11ಕೆವಿ ವಿದ್ಯುತ್ ಕೇಂದ್ರ ಮತ್ತು 110/11ಕೆವಿ ವಿದ್ಯುತ್  ಕೇಂದ್ರ ನಂದಿಕೂರಿನಿಂದ 110/11ಕೆವಿ ವಿದ್ಯುತ್ ಕೇಂದ್ರ ಬೆಳಪುವರೆಗೆ 110ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ 110 ಕೆವಿ ನಂದಿಕೂರು-ಐಎಸ್
ಪಿಆರ್ ಎಲ್ ಏಕ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಎರಡನೇ ವಿದ್ಯುತ್ ಪ್ರಸರಣ ಮಾರ್ಗವನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ, 110/11ಕೆವಿ ನಂದಿಕೂರು ವಿದ್ಯುತ್ ಸ್ಥಾವರದಿಂದ ಹೊರಡುವ 110ಕೆವಿ SUZ & ISP ಮತ್ತು ಎಲ್ಲಾ 11ಕೆವಿ ಮಾರ್ಗಗಳಾದ ಅಡ್ಡೆ, ಸಾಂತೂರು, ಬಲ್ಕುಂಜೆ, ನಂದಿಕೂರು, ಎಲ್ಲೂರು, ಪಲಿಮಾರು, ಎರ್ಮಾಳು, ಬೈಟ್ ಪ್ಲೆಕ್ಸಿ, ಯಾಶ್ ಟೆಕ್ ಹಾಗೂ ಬೆಳಪು ಮಾರ್ಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ರ ವರೆಗೆ
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!