ಕರಾವಳಿ

ಯಕ್ಷಗಾನ ಸಮ್ಮೇಳನಕ್ಕೆ ರೋಹಿತ್ ಚಕ್ರತೀರ್ಥ ಆಯ್ಕೆ ಸರಿಯಾದುದ್ದಲ್ಲ: ಪ್ರವೀಣ್ ಎಂ ಪೂಜಾರಿ

ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆಯಿದೆ.ಅದನ್ನು ನೆನಪಿಸುವ ಮತ್ತು ಭವಿಷ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ಸಮ್ಮೇಳನ ಆಯೋಜನೆ ಅಭಿನಂದನಾರ್ಹವಾದುದು.ಆದರೆ ಇಂತಹ ಪ್ರತಿಷ್ಠಿತ ಕಾರ್ಯಕ್ರಮದ ದಿಕ್ಸೂಚಿ ಭಾಷಣಕ್ಕೆ ರೋಹಿತ್ ಚಕ್ರತೀರ್ಥರವರನ್ನು ಆಹ್ವಾನಿಸಿರುವುದು ಆಶ್ಚರ್ಯಕರವಾಗಿದೆ.ರೋಹಿತ್‌ರವರು ಪಠ್ಯಪುಸ್ತಕ ಸಮಿತಿಯಲ್ಲಿದ್ದಾಗ ಸುಧಾರಣಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕುವಂತಹ ದುಸ್ಸಾಹಸ ಮಾಡಿದವರು.ಇಂದಿಗೂ ಈ ವಿಷಯ ಸಮರ್ಪಕವಾಗಿ ಬಗೆಹರಿದಿಲ್ಲ.ಅಲ್ಲದೆ ರಾಷ್ಟ್ರ ಕವಿ ಕುವೆಂಪು ವಿರಚಿತ ನಾಡಗೀತೆಗೂ ಅವಮಾನ ಮಾಡಿದ್ದರು.ಇಷ್ಟೆಲ್ಲಾ ವಿವಾದಿತ ವ್ಯಕ್ತಿಯಾಗಿ ಹಾಗೂ ಯಕ್ಷಗಾನದಲ್ಲೂ ಏನೇನೂ ಸಾಧನೆ ಮಾಡಿಲ್ಲದ ರೋಹಿತ್ ಆಯ್ಕೆ ಯಾವ ಮಾನದಂಡದಲ್ಲಿ ಆಗಿದೆ ಎಂಬುದು ತಿಳಿಯುತ್ತಿಲ್ಲ.ಯಕ್ಷಗಾನದಲ್ಲಿ ಅವಿರತ ಸಾಧನೆ ಮಾಡಿದ ಕಲಾದಿಗ್ಗಜರು,ಯಕ್ಷ ವಿದ್ವಾಂಸರು ನಮ್ಮಲ್ಲಿರುವಾಗ ರೋಹಿತ್ ಆಹ್ವಾನವನ್ನು ತಿರಸ್ಕರಿಸುವುದು ಒಳ್ಳೆಯದು ಎಂದು ನಮ್ಮ ಅಭಿಪ್ರಾಯವೆಂದು ಪ್ರವೀಣ್ ಎಂ ಪೂಜಾರಿ ಅಧ್ಯಕ್ಷರು  ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಪ್ರಕಟ್ಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!